‘ರವೀಂದ್ರನಾಥ್ ಠಾಕೂರ್’ ಕೃತಿಯು ಚಿಂತಾಮಣಿ ಕೊಡ್ಲೆಕೆರೆ ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ರವೀಂದ್ರನಾಥ ಠಾಕೂರ ಅವರು ನೊಬೆಲ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಭಾರತದ ಸಾಹಿತ್ಯ-ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತೀಯ ಸಾಹಿತ್ಯ-ಸಂಸ್ಕೃತಿ-ಆದರ್ಶ-ಅಧ್ಯಾತ್ಮಿಕ ಶಿಕ್ಷಣ, ಸಾಮರಸ್ಯದ ಬಾಳು-ಸರ್ವ ಜನರಿಗೂ ಶಾಂತಿ ಬಯಸುವ ಉನ್ನತ ಮೌಲ್ಯಗಳನ್ನು ತಮ್ಮ ಸಾಹಿತ್ಯದ ಮೂಲಕ ತೋರಿದ್ದಾರೆ ಮಾತ್ರವಲ್ಲ; ಅವರ ಬದುಕೇ ಹಾಗಿತ್ತು ಎಂದರೆ ಸೂಕ್ತ. ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು. ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಇಲ್ಲಿ ಅನುರಣಿಸಿ ಕೃತಿಯನ್ನು ರಚಿಸಲಾಗಿದೆ.
ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್‌ಸಿ ಪದವಿ ಪಡೆದರು. ತ್ರಿವೆಂಡ್ರಮ್‌ನಲ್ಲಿ ಟೆಲಿ ಕಮ್ಯುನಿಕೇಶನ್ಸ್‌ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು. ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ...
READ MORE