ಹಿರಿಯ ಲೇಖಕ ಪ್ರೊ.ಶಾಶ್ವತಸ್ವಾಮಿ ಮುಕ್ಕುಂದಿ ಮಠ ಅವರ ಕೃತಿ-ಸಾಧಕರ ಚಿತ್ರ ಚಂದ್ರಶಾಲೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಡಾ. ಎಚ್. ತಿಪ್ಪೇರುದ್ರಸ್ವಾಮಿ,ಹರವಿ ವಿರುಪಾಕ್ಷಪ್ಪ ಗೌಡ, ಮಹದೇವಪ್ಪ ಕಡೆಚೂರು, ಅಬ್ಬಿಗೇರಿ ವಿರುಪಾಕ್ಷಪ್ಪ, ಗದುಗಿನ ಸಿದ್ಧಲಿಂಗಸ್ವಾಮಿಗಳು, ವಕೀಲ ನಾಗಪ್ಪ, ಮೊಹಮ್ಮದ್ ಅಜರುದ್ದಿನ್, ಕಾಯಕಯೋಗಿ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಸಾಹಿತಿ ವಸಂತ ಕುಷ್ಟಗಿ, ಸೇರಿದಂತೆ ಸಾಧನೆ ಮಾಡಿದ ಮರೆಯಲಾಗದ ಮಹಾಪುರುಷರ ಜೀವನ ಸಾಧನೆ ಹಾಗೂ ಬದುಕು ಬರಹಗಳನ್ನು ದಾಖಲು ಮಾಡಿದ ಕೃತಿ ಇದು.
ಹಿರಿಯ ಲೇಖಕ ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಸರಕಾರಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ,,ಪ್ರಾಚಾರ್ಯರಾಗಿ ನಿವೃತ್ತರು. ಕೃತಿಗಳು: ಸಾಧಕರ ಚಿತ್ರ ಚಂದ್ರಶಾಲೆ ಸೇರಿದಂತೆ ಸಾಹಿತ್ಯಕ್ಷೇತ್ರಕ್ಕೆ 50ಕ್ಕಿಂತ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ...
READ MORE