`ನಾರಾಯಣ ಗುರು’ ಕೃತಿಯು ಚಿಂತಾಮಣಿ ಕೊಡ್ಲೆಕೆರೆ ಅವರ ವ್ಯಕ್ತಿಚಿತ್ರಣ ಕೃತಿಯಾಗಿದೆ. ಈ ವ್ಯಕ್ತಿಚಿತ್ರ ಮಾಲೆಯಲ್ಲಿ ಧರ್ಮ, ತತ್ವಶಾಸ್ತ್ರ, ಚರಿತ್ರೆ, ವಿಜ್ಞಾನ, ಅರ್ಥಶಾಸ್ತ್ರ, ಪರಿಸರ, ಉದ್ಯಮ ರಾಜಕೀಯ, ಸಮಾಜ ಸುಧಾರಣೆ, ಸಾಹಿತ್ಯ, ಸಂಗೀತ, ಲಲಿತ ಕಲೆ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನೂ ಅದ್ವಿತೀಯ ಸಾಧನೆಗಳನ್ನೂ ಮಾಡಿದ ಮೇಧಾವಿಗಳ ಜೀವನಚಿತ್ರಗಳಿವೆ. ಇವುಗಳಲ್ಲಿ ಪ್ರತಿಯೊಬ್ಬ ಮೇಧಾವಿಯ ವಿಚಾರಗಳನ್ನು ಅವರ ಕಾಲದ ಸಾಮಾಜಿಕ ಹಾಗೂ ಬೌದ್ಧಿಕ ಪರಿಸರದಲ್ಲಿಟ್ಟು ವಿಶ್ಲೇಷಿಸಲಾಗಿದೆ. ಸಮಾಜದ ಮೇಲೆ ಆ ಮೇಧಾವಿ ಬೀರಿದ ಪ್ರಭಾವ, ಮನುಷ್ಯನನ್ನೂ ಪರಿಸರವನ್ನೂ ಅರ್ಥಮಾಡಿಕೊಳ್ಳುವ ದಿಸೆಯಲ್ಲಿ ಅವರು ನೀಡಿರುವ ನಿರ್ದಿಷ್ಟ ಕೊಡುಗೆ, ಅವರ ವಿಚಾರಗಳ ಸ್ಫೂರ್ತಿಯಿಂದ ರೂಪುಗೊಂಡಿರುವ ಜೀವನಕ್ರಮ, ಇವುಗಳನ್ನೂ ವಿವರಿಸಲಾಗಿದೆ. ಸಾಧ್ಯವಾದ ಕಡೆಗಳಲ್ಲೆಲ್ಲ ಮೇಧಾವಿಗಳ ಮಾತುಗಳಿಂದ, ಬರವಣಿಗೆಗಳಿಂದ ಸೂಕ್ತವೆಂದು ವಿಬಂದ ಭಾಗಗಳನ್ನು ಉದ್ಧರಿಸಲಾಗಿದೆ. ಹೊಸ ಸಿದ್ಧಾಂತಗಳನ್ನು ಸೃಷ್ಟಿಸಿದರೆ, ಹೊಸ ಚಳವಳಿಗಳನ್ನು ಸ್ಥಾಪಿಸಿದವರ, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಹತ್ವದ ಪ್ರಭಾವವೂ ಘನತೆಯೂ ಇದ್ದು, ಹೊಸ ಆವಿಷ್ಕಾರಗಳನ್ನೂ ಅದ್ವಿತೀಯ ಸಂಯೋಜನೆಯನ್ನೋ ಮಾಡಿದವರ ಬಗೆಗೆ ವಿಶೇಷ ಗಮನ ನೀಡಲಾಗಿದೆ.
ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್‌ಸಿ ಪದವಿ ಪಡೆದರು. ತ್ರಿವೆಂಡ್ರಮ್‌ನಲ್ಲಿ ಟೆಲಿ ಕಮ್ಯುನಿಕೇಶನ್ಸ್‌ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು. ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ...
READ MORE