ನಾಗ ಎಚ್. ಹುಬ್ಳಿ ಅವರ `ಹಾಕಿ ಮಾಂತ್ರಿಕ ಧ್ಯಾನ ಚಂದ್' ಕೃತಿಗೆ ಗೋಪಾಲಕೃಷ್ಣ ಹೆಗಡೆ ಅವರ ಬೆನ್ನುಡಿ ಬರಹವಿದೆ: ಕನ್ನಡದಲ್ಲಿ ಕ್ರೀಡಾ ಪುಸ್ತಕಗಳು ಬಹಳ ಕಡಿಮೆ. ಅದರಲ್ಲೂ ಹಾಕಿ ಆಟದ ಬಗ್ಗೆ ವಿಶೇಷ ಪುಸ್ತಕಗಳು ಇಲ್ಲವೇ ಇಲ್ಲ ಎನ್ನಬಹುದು. ಆ ಕೊರತೆಯನ್ನು ನೀಗಿಸುವ ಉತ್ತಮ ಪ್ರಯತ್ನವನ್ನು 'ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್' ಮೂಲಕ ಡಾ. ನಾಗ ಎಚ್. ಹುಬ್ಳಿಯವರು ಮಾಡಿದ್ದಾರೆ. ಬದುಕಿರುವಾಗಲೇ ದಂತಕಥೆಯಾದವರು ಧ್ಯಾನಚಂದ್. ಅವರ ಬಾಲ್ಯ, ಆಟ, ಒಲಿಂಪಿಕ್ಸ್ ಸಾಧನೆ, ಬದುಕಿನ ಕೊನೆಯವರೆಗಿನ ಕತೆ ಇಲ್ಲಿ ಓದುಗರ ಮನ ಮುಟ್ಟುತ್ತದೆ. ಯುವ ಆಟಗಾರರಿಗೆ ಸ್ಫೂರ್ತಿ ಮೂಡಿಸುತ್ತದೆ. ಇಲ್ಲಿನ ಬರೆವಣಿಗೆ ಸರಳವಾಗಿಯೂ, ಸ್ಪಷ್ಟವಾಗಿಯೂ ಇದೆ. ಯಾವ ಪ್ರಾಧ್ಯಾಪಕನಲ್ಲಿಯೂ ಕ್ರೀಡೆಯ ಬಗ್ಗೆ ಆಸಕ್ತಿ, ಬರೆಯುವ ಉತ್ಸಾಹವನ್ನು ನಾನು ಕಂಡಿಲ್ಲ. ಡಾ. ನಾಗ ಎಚ್. ಹುಬ್ಳಿಯವರಿಗೆ ಅಭಿನಂದನೆಗಳನ್ನು ತಿಳಿಸುವ ಮೂಲಕ ಈ ಪುಸ್ತಕಕ್ಕೆ ಸುಂದರವಾದ ಬರಹವನ್ನು ನೀಡಿದ್ದಾರೆ.
ಡಾ. ನಾಗ ಎಚ್. ಹುಬ್ಬಿ ಅವರು ಮೂಲತಃ ಹುಬ್ಬಳ್ಳಿಯವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹಲವಾರು ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಆದಿವಾಸಿಗಳನ್ನು ಕುರಿತು ಕಳೆದ 22 ವರ್ಷಗಳಿಂದ ಝಾರ್ಖಂಡ್, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಾಂಡಾಗಳಿಗೆ ನಿರಂತರ ಭೇಟಿ ನೀಡಿ ಜನಾಂಗೀಯ ಅಧ್ಯಯನ ನಡೆಸುತ್ತಿದ್ದಾರೆ. 'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು, ಆದಿವಾಸಿ ಸಂಸ್ಕೃತಿ' ಮತ್ತು 'ಅಸುರ' ಇವರ ಇತರ ಕೃತಿಗಳು. ...
READ MORE