ಲೇಖಕ ವೀರಭದ್ರಪ್ಪ ಬಿಸ್ಲಳ್ಳಿ ಅವರ ಲೋಕಾಂತರ ಮೊರೆತ’ ಕೃತಿಯು ಶೋಧನಾ ಪಯಣ ಕುರಿತ ಕೃತಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಬಿ.ಎಲ್ ಶಂಕರ್ ಅವರು, ಲೋಕಾಂತರದ ಮೊರೆತ ರಾಜಕೀಯವೆಂದರೆ ಮನಸ್ಸುಗಳನ್ನು ಬದಲಾಯಿಸುವ ಆಂದೋಲನವಾಗಿ ಕಾಣುತ್ತಿದ್ದ ಕಾಲದಿಂದ ಅಧಿಕಾರದ ಹಪಾಹಪಿಯ ಕಾಲಕ್ಕೆ ಬಂದು ನಿಂತಿದ್ದೇವೆ. ಜಾತ್ಯತೀತ ಪ್ರಜಾಪ್ರಭುತ್ವ ದೇಶದಲ್ಲಿ ಜಾತಿಪ್ರಭುತ್ವವಾಗಿರುವುದನ್ನು ಕಾಣುತ್ತಿದ್ದೇವೆ. ಆದರೆ, ಪಟೇಲರು ತತ್ವಬದ್ದ ಜಾತ್ಯತೀತ ನಿಲುವಾಗಿತ್ತು ಎಂಬುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಜೆ.ಎಚ್ ಪಟೇಲರ ವ್ಯಕ್ತಿತ್ವದ ಆಳ-ಅರಿವು- ಅಳತೆಗಳ ವಿವರಣೆ ಓದುತ್ತಾ ಹೋದಂತೆ ನನ್ನದೇ ಅನುಭವಗಳನ್ನು ಓದುತ್ತಿದ್ದೇನೆ ಅಂತನಿಸಿದ್ದು ಸುಳ್ಳಲ್ಲ. ಪಟೇಲರ ಕಾಲದ ರಾಜಕಾರಣದ ಚಿತ್ರಯಾತ್ರೆ ಹಾಗೇ ಒಮ್ಮೆ ಕಣ್ಣಮುಂದೆ ಹಾದು ಹೋದಂತಾಯಿತು. ಅಷ್ಟು ಪ್ರಭಾವಶಾಲಿ ಬರವಣಿಗೆ; ಪ್ರಸ್ತುತಪಡಿಸಿದ ರೀತಿ ವೀರಭದ್ರಪ್ಪನವರೊಳಗಿನ ಸಾಹಿತಿಯನ್ನು ಪರಿಚಯಿಸಲು ಬಳಸಿದ ವಿಚಾರ ಸಂಗ್ರಹ ಸಾರ್ವಜನಿಕ ಬದುಕಿನಲ್ಲಿ ಕ್ರಿಯಾಶೀಲರಾಗಬಯಸುವ ಯುವಪೀಳಿಗೆಗೆ, ಯುವ ರಾಜಕಾರಣಿಗಳಿಗೆ ಅಧ್ಯಯನ ಯೋಗ್ಯವಾಗಿ ಪ್ರಸ್ತುತಿಯಾಗಿದೆ ಈ ಕೃತಿ’ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವೀರಭದ್ರಪ್ಪ ಬಿಸ್ಲಳ್ಳಿ ಅವರು ಓದುವಾಗಲೇ ವಾರಪತ್ರಿಕೆಯಲ್ಲಿ ಅರೆಕಾಲಿಕ ವರದಿಗಾದರನಾಗಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದವರು. ನಂತರ ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಪೂರ್ಣಾವಧಿ ವರದಿಗಾರನಾಗಿ ವೃತ್ತಿ ಜೀವನ ಆರಂಭಿಸಿದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ,ಹಿರಿಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ರಾಜ್ಯಧರ್ಮ ಕನ್ನಡ ದಿನಪತ್ರಿಕೆಯ ಬೆಂಗಳೂರು, ಮೈಸೂರು ಆವೃತ್ತಿಗಳ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ...
READ MORE