ಖ್ಯಾತಿವೆತ್ತ ಭಾರತೀಯರು-(ಜಗದ್ವಿಖ್ಯಾತರು-ಭಾಗ-2) ಕೃತಿಯನ್ನು ಚಿಂತಕ ಪಾ.ವೆಂ. ಆಚಾರ್ಯರು ಬರೆದಿದ್ದಾರೆ. ಮಹಾತ್ಮಗಾಂಧಿ, ಅಂಬೇಡ್ಕರ, ನೆಹರೂ ಹೀಗೆ ಖ್ಯಾತಿವೆತ್ತ ಭಾರತೀಯರನ್ನು ವಿದ್ವತ್ ಪೂರ್ಣವಾದ ಲೇಖನಗಳ ಮೂಲಕ ಅವರ ಜೀವನ ಚಿತ್ರಣದ ಸಂಕ್ಷಿಪ್ತ ಪರಿಚಯ ಹಾಗೂ ಸಾಧನೆಗಳನ್ನು ವಿವರಿಸಿರುವ ಕೃತಿ ಇದು.
ಅಂಬೇಡಕರರು ಹಾಗೇಕಾದರು?, ಆದರ್ಶ ರೈತ ಚಿನ್ನಮಲ್ಲಪ್ಪ ಅಸುಂಡಿಯವರು, ಟ್‌ಐಪ್ ರೈಟರ್ ನಿರ್ಮಿಸಿದ ಕಟ್ಟಿಯವರು, ಸುಚೇತಾ ಕೃಪಲಾನಿ, ಕಲಾಗುರು ಜಿ.ಎಸ್. ದಂಡಾವತಿಮಠ, ಶಂಕರನ್ ನಂಬೂದ್ರಿಪಾದ ಯಾರು?, ಆ ನೆಹರೂ ಕೋಪ, ಕಮಲಾ ನೆಹರೂ, ಮುರಾರ್ಜಿ ದೇಸಾಯಿ, ರಾಮಮನೋಹರ ಲೋಹಿಯಾ ಹೀಗೆ ಒಟ್ಟು 42 ಮಹನೀಯರ ಜೀವನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಶ್ರೀನಿವಾಸ ಹಾವನೂರು ಅವರು ಈ ಕೃತಿಯ ಪ್ರಧಾನ ಸಂಪಾದಕರು.
ಲಾಂಗೂಲಾಚಾರ್ಯ ಎಂದು ಖ್ಯಾತರಾಗಿದ್ದ ಪಾಡಿಗಾರು ವೆಂಕಟರಮಣ ಆಚಾರ್‍ಯರು ಜನಿಸಿದ್ದು 1933ರಲ್ಲಿ. ಉಡುಪಿಯವರಾದ ಪಾ.ವೆಂ. ಅವರ ತಂದೆ ಲಕ್ಷ್ಮೀರಮಣಾಚಾರ್ಯ, ತಾಯಿ ಸೀತಮ್ಮ. ಶಿಕ್ಷಣವನ್ನು ಉಡುಪಿಯಲ್ಲಿ ಪಡೆದ ಅವರು ಶಾಲೆಯಲ್ಲಿ ಕಲಿತಿದ್ದು ಕೇವಲ ಮ್ಯಾಟ್ರಿಕ್ ವರೆಗೆ ಮಾತ್ರ. ಮನೆಯ ಆರ್ಥಿಕ ಸ್ಥಿತಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡಲಿಲ್ಲ. ಕೆಲ ಕಾಲ ಅಂಗಡಿ ಹಾಗೂ ಹೊಟೇಲುಗಳಲ್ಲಿ ಗುಮಾಸ್ತರಾಗಿ ಮತ್ತು ಕೆಲವೆಡೆ ಶಿಕ್ಷಕರಾಗಿ ವೃತ್ತಿ ಜೀವನ ನಡೆಸಿದರು. 1937 ರಲ್ಲಿ ಆರಂಭವಾದ ಉಡುಪಿಯ 'ಅಂತರಂಗ' ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಪತ್ರಿಕೋದ್ಯಮಕ್ಕೆ ಬಂದ ಪಾವೆಂ ಅವರು 1941ರಲ್ಲಿ 'ಲೋಕ ಶಿಕ್ಷಣ ಟ್ರಸ್ಟ್' ಸೇರಿದರು. ...
READ MORE