ಲೇಖಕಿ ಆಶಾ ಯಮಕನಮರಡಿ ಅವರು ಬರೆದ ಕೃತಿ-ಬೆಳಗಾವಿ ಜಿಲ್ಲಾ ವಿಶಿಷ್ಟ ಸಾಧಕಿಯರು. ಕಿತ್ತೂರು ರಾಣಿ ಚೆನ್ನಮ್ಮಳ ಸಂಸ್ಥಾನ ವ್ಯಾಪ್ತಿಯ ಪ್ರದೇಶ ಎಂದೇ ಖ್ಯಾತಿಯ ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಮಹಿಳೆಯರು ಸಾಧಕಿಯರಿದ್ದು, ಅವರ ಸಾಧನೆಯ ಬದುಕನ್ನು ಲೇಖಕಿ ಕಟ್ಟಿಕೊಟ್ಟಿದ್ದಾರೆ.
ಸವದತ್ತಿಯ ಬಸಮ್ಮ ಅನಕ್ಷರಸ್ಥೆ, ಕೃಷಿಕಳು. ಬಿತ್ತನೆಯಿಂದ ಹಿಡಿದು ರಂಟೆ-ಕುಂಟೆಯಂತಹ ಕೆಲಸದ ಜೊತೆಗೆ ರಾಶಿಯಾದ ನಂತರ ಮಾರುಕಟ್ಟೆಗೆ ಧಾನ್ಯಗಳನ್ನು ಸಾಗಿಸುವ ವ್ಯವಹಾರದತನಕವೂ ಅವರದೇ ನೇತೃತ್ವ. ಲಕ್ಷ್ಮಿ ಅರಬೆಂಚಿ- ಜನಪದ ಸಾಹಿತ್ಯ ಸಂಗ್ರಾಹಕಿ. ಪೂಜಾ ನಾಗಲಿಕರ್ ಎಂಬುವರು ವೈದ್ಯರಿದ್ದೂ ನೃತ್ಯದೆಡೆಗೆ ಅಪರಿಮಿತ ಆಸಕ್ತಿ, ಯೋಗ ಸಾಧಕಿ ಸತ್ಯ ಮೇಧಾವಿ, ಎಂಜಿನಿಯರಿಂಗ್ ಪದವೀಧರೆ. ಆದರೂ, ಯೋಗಾಸಕ್ತಿ ಅವರನ್ನು ಸೆಳೆದಿದ್ದು, ಜನಸಾಮಾನ್ಯರಿಗೆ ಯೋಗದ ಅರಿವು ಹಾಗೂ ಸಾಧನೆಗೆ ಪ್ರೇರಣೆಯಾಗಿ ತಾವೇ ವಿವಿದೆಡೆ ಹೋಗಿ ತರಬೇತಿ ನೀಡುತ್ತಾರೆ. ಜನರು ಅವರನ್ನು ಅಭಿಮಾನದಿಂದ ನಿತ್ಯ ಸಂಚಾರಿ ಎಂದೇ ಕರೆಯುತ್ತಾರೆ. ಹೀಗೆ, 22 ಜನ ಸಾಮಾನ್ಯ ಮಹಿಳೆಯರಲ್ಲಿ ಅಸಾಮಾನ್ಯ ಗುಣವನ್ನು ಗ್ರಹಿಸಿರುವ ಲೇಖಕಿ ಆಶಾ ಯಮಕನಮರಡಿ ಅವರು ಈ ಎಲ್ರಲ ಸಾಧಕಿಯರ ಮಾದರಿ ಬದುಕು ಹಾಗೂ ಅನುಕರಣೀಯ ವ್ಯಕ್ತಿತ್ವವನ್ನು ಪರಿಚಯಿಸಿದ್ದು, ಸಾಹಿತ್ಯ ಸೇವೆಯ ಜವಾಬ್ದಾರಿ ದೃಷ್ಟಿಯಿಂದ ಗಮನಾರ್ಹವಾದುದು.
©2024 Book Brahma Private Limited.