ಲೇಖಕ ನಾಗಯ್ಯಸ್ವಾಮಿ ಅಲ್ಲೂರ ಅವರು ರಚಿಸಿದ ಕೃತಿ-ನಾಗಾವಿ ನಾಡಿನ ಸಾಧಕರು. ತಮ್ಮ ಸುತ್ತಮುತ್ತಲಿನ ಪರಿಸರದ ಸಾಧಕರಾದ ಅಳ್ಳೊಳ್ಳಿಯ ವೈದ್ಯ ಸಂಜೀವಿನಿ ಹಂಪಯ್ಯ ಸ್ವಾಮಿಗಳು., ಕವಿ-ತತ್ವಪದಕಾರ ಪಂಚಾಕ್ಷರಿ ಪೂಜಾರಿ, ದಂಡಗುಂಡ, ಸಹೃದಯ ಕ್ರಿಯಾಶೀಲ ಸಾಹಿತಿ ಲಿಂಗಾರೆಡ್ಡಿ ಶೇರಿ, ರಂಗಭೂಮಿ ಹಾಸ್ಯ ಬ್ರಹ್ಮ ವಿಶ್ವನಾಥ ಮಾಸ್ತರ ಬೆಳಗುಂಪಾ, ಗಡಿನಾಡಿನಲ್ಲಿ ಸಂಗೀತ ದೀಕ್ಷೆ ರೇವಣಸಿದ್ದಯ್ಯ ಹಿರೇಮಠ, ಆದರ್ಶತನಕ್ಕೆ ಸಾಕ್ಷಿಪ್ರಜ್ಞೆ ನಾಗಯ್ಯಸ್ವಾಮಿ ನಿಟ್ಟೂರು, ಗಾಂಧಿವಾದಿ ಸ್ವಾತಂಯ್ಯ್ರ ಯೋಧ ಬಸಪ್ಪ ಸಜ್ಜನಶೆಟ್ಟಿ, ಕ್ರೀಡಾಕ್ಷೇತ್ರದ ದಿವ್ಯ ಚೇತನ ಶಿಕ್ಷಕ ದೇವೇಂದ್ರ ರೆಡ್ಡಿ ದುಗನೂರು...ಹೀಗೆ 15 ಸಾಧಕರನ್ನು ಪರಿಚಯಿಸಲಾಗಿದೆ. ಭಕ್ತರ ಆರಾಧ್ಯದೈವ ದಂಡಗುಂಡ ಬಸವಣ್ಣ, ಉಧೋ ಉಧೋ ಯಲ್ಲಮ್ಮ ದೇವಿ, ಅವಸಾನ ಅಂಚಿನಲ್ಲಿರುವ ನಾಗಾವಿ ಸ್ಮಾರಕಗಳು, ಪಂಚಸ್ಪರ್ಶಗಳ ತವನಿಧಿ ದಿಗ್ಗಾಂವಿ ಮಠ, ಡೋಣಗಾಂವ್ ಬಾಣತಿ ಕಂಬದ ಮಹಿಮೆ ಹೀಗೆ ಧಾರ್ಮಿಕ ಲೇಖನಗಳು ಈ ಕೃತಿಯಲ್ಲಿ ಒಳಗೊಂಡಿವೆ.
ನಾಗಯ್ಯಸ್ವಾಮಿ ಅಲ್ಲೂರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ (ಬಿ) ಗ್ರಾಮದವರು. ತಂದೆ ವೀರಯ್ಯಸ್ವಾಮಿ, ತಾಯಿ ಮಹಾದೇವಮ್ಮ. ಬಿ.ಎ. ಬಿ.ಇಡಿ ಪದವೀಧರರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕ್ರಮವಾಗಿ ಅಲ್ಲೂರ (ಬಿ) ಅಳ್ಳಳ್ಳಿ ಯಲ್ಲಿ ಪೂರೈಸಿ, ಪಿಯುಸಿ ಹಾಗೂ ಬಿಎ ಪದವಿಯನ್ನು ಸುರಪುರದಲ್ಲಿ ಪೂರ್ಣಗೊಳಿಸಿದರು. ಚಿತ್ತಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾಗಿದ್ದರು. ನಾಗಾವಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳ ತಾಲೂಕು ವರದಿಗಾರರಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯದ ತಾಲೂಕು ಸಮ್ಮೇಳನ, ವಲಯ ಸಮ್ಮೇಳನ, ಜಾನಪದ ಕಲಾವಿದರ ...
READ MORE