ಹೊರಗಿನಿಂದ ಸಾಮನ್ಯರಂತೆ ಕಂಡರೂ ಅವರಲ್ಲಡಗಿರುವ ಅಸಾಮಾನ್ಯ ಗುಣಗಳನ್ನು ಹೊರ ತರುವ ಪ್ರಯತ್ನ `ಸಾಮಾನ್ಯರಲ್ಲಿ ಅಸಾಮಾನ್ಯರು’ ಪುಸ್ತಕದಲ್ಲಾಗಿದೆ.
ಉತ್ತರ ಕರ್ನಾಟಕದ ಸಂಸ್ಕೃತಿ, ಖಡಕ್ ಮಾತಿನ ಧಾಟಿ ಮತ್ತಿತರ ವಿಶಿಷ್ಟತೆಗಳನ್ನು ತೆಗೆದುಕೊಂಡು ಕೆಲವು ವ್ಯಕ್ತಿಗಳ ಚಿತ್ರಣ ಇಲ್ಲಿ ಮೂಡಿಸಿದ್ದಾರೆ ಸುಧಾ ಮೂರ್ತಿ.
19 ವ್ಯಕ್ತಿಗಳ ಪರಿಚಯ, ಅವರ ಅಸಾಮಾನ್ಯ ಗುಣಗಳು, ವಿಶೇಷ ಪ್ರತಿಭೆ ಮತ್ತು ಅವರ ಪರಿಚಯವಿದೆ. ಇಲ್ಲಿನ ಲೇಖನಗಳಿಗೆ ಸಮರ್ಥ ಶೀರ್ಷಿಕೆಗಳನ್ನು ಇಟ್ಟಿರುವುದು ಗಮನಾರ್ಹ. ಈ ಕೃತಿ ಈವರೆಗೂ 10 ಮುದ್ರಣಗಳನ್ನು ಕಂಡಿದೆ.
ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸುಧಾ ಮೂರ್ತಿ ಅವರಿಗೆ ರೋಟರಿ ...
READ MORE