ಲೇಖಕಿ ಭಾರತಿ ಹೆಗಡೆ ಅವರು ನಲವತ್ತಕ್ಕೂ ಹೆಚ್ಚು ರೈತ ಮಹಿಳೆಯರನ್ನು `ಮಣ್ಣಿನ ಗೆಳತಿ' ಕೃತಿ ಮೂಲಕ ನಮಗೆ ಪರಿಚಯ ಮಾಡಿಸಿದ್ದಾರೆ. ಶಾಲೆಯ ಮುಖ ನೋಡದವರ, ಪದವಿ ಪಡೆದವರ ಕೈಗಳೂ ಹೊಲ ಗದ್ದೆ ತೋಟಗಳಲ್ಲಿ ಹೆಣೆದ ಹೊಸ ಕಥೆಗಳನ್ನು ಇಲ್ಲಿ ಕಾಣಬಹುದು.
ಪತ್ರಕರ್ತೆ, ಕವಯತ್ರಿ ಭಾರತಿ ಹೆಗಡೆಯವರ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇವರು ಕೃತಿಗಳು: ಮೊದಲಪತ್ನಿಯ ದುಗುಡ (ಸಿನಿಮಾದಲ್ಲಿನ ಮಹಿಳಾ ಪಾತ್ರಗಳ ವಿಶ್ಲೇಷಣೆ), ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು (ಸಣ್ಣ ಕಥಾಸಂಕಲನ), ಮಣ್ಣಿನ ಗೆಳತಿ (ಕೃಷಿ ಮಹಿಳೆಯರ ಅನುಭವ ಕಥನ), ಹಾಗೂ ಹರಿವ ನದಿ (ಮೀನಾಕ್ಷಿ ಭಟ್ಟ ಅವರ ಆತ್ಮಕಥನ) ...
READ MORE