‘ಎದೆಯ ಕದ ತಟ್ಟಿದವರು’ ಡಾ. ಎನ್. ಜಗದೀಶ್ ಕೊಪ್ಪ ಅವರ ಕೃತಿಯಾಗಿದ್ದು, ಮಹಾನ್ ದಾರ್ಶನಿಕ ಮನೋಭಾವದ ವ್ಯಕ್ತಿಗಳ ಬದುಕಿನ ಚಿತ್ರಣವಾಗಿದೆ. ಈ ಕೃತಿಯಲ್ಲಿ ಗಾಂಧಿ, ನೆಹರು, ಲೋಹಿಯಾ, ಜೆ.ಪಿ. ಮುಂತಾದ ಮಹನೀಯರಿಂದ ಹಿಡಿದು ಜಗತ್ತಿನ ಶ್ರೇಷ್ಠ ಅರ್ಥಶಾಸ್ತ್ರಜ್ಞರ ಬದುಕಿನ ವಿವರ ಹಾಗೂ ಚಿಂತನೆಗಳಿವೆ. ಗಾಂಧಿ ಎಂಬ ಧ್ಯಾನ, ಚಂಪಾರಣ್ಯ ಸತ್ಯಾಗ್ರಹದ ರೂವಾರಿಗಳು, ಚರಕವು ಗಾಂಧೀಜಿಯವರ ಅಸ್ತ್ರವಾದ ಕಥನ, ಗಾಂಧೀಜಿ ಚಿಂತನೆಗಳ ವಾರಸುದಾರ ಶೂ ಮಾಕರ್, ನವ ಭಾರತದ ಶಿಲ್ಪಿ ಪಂಡಿತ್ ಜವಹರಲಾಲ್ ನೆಹರು, ಗಾಂಧಿ ಮತ್ತು ನೆಹರು ನಡುವಿನ ಭಿನ್ನಮತ, ನಾರಾಯಣ ದೇಸಾಯಿ ಅವರ “ನನ್ನ ಗಾಂಧಿ” ಕೃತಿ, ಅಪ್ಪಟ ಸಮಾಜವಾದಿ ನಾಯಕ ಜಯಪ್ರಕಾಶ ನಾರಾಯಣ, ರಾಮಮನೋಹರ ಲೋಹಿಯಾ, ಸಮಾಜವಾದಿ ಚಿಂತಕ ಪ್ರೊ. ಮಧು ದಂಡವತೆ ನೆನಪುಗಳು, ಮಾನವೀಯ ಮುಖದ ಮಹಾನ್ ಚಿಂತಕ ಗುನ್ನಾರ್ ಮಿರ್ಡಾಲ್, ಅಮರ್ತ್ಯ ಸೇನ್, ಬಡವರ ಬಂಧು : ಪ್ರೊ. ಮಹಮ್ಮದ್ ಯೂನಸ್, ವಿಶ್ವ ಪ್ರಸಿದ್ಧ ಅರ್ಥದೊಂದಿಗೆ ಡಾ. ಮನಮೋಹನ್ ಸಿಂಗ್, ಹೊಸ ಭಾಷ್ಯ ಬರೆದ ಬಿಬಿಸಿ ಪತ್ರಕರ್ತ ಮಾರ್ಕ್ ಟುಲ್ಲಿ, ಹರ್ಷಮಂದರ್ ಎಂಬ ಭಾರತದ ಸಾಕ್ಷಿಪ್ರಜ್ಞೆ, ಮಹಾನ್ ಮಾನವತಾವಾದಿ ಶ್ರೀಮತಿ ಧರ್ಮ ಕುಮಾರ್, ನಾಡಿಯಾ ಮುರಾದ್ ಎಂಬ ಸ್ತ್ರೀಲೋಕದ ಧ್ವನಿ, ಭಾರತದ ಪತ್ರಿಕೋದ್ಯಮದ ಸಾಕ್ಷಿ ಸಾಕ್ಷಿ ಪಿ. ಸಾಯಿನಾಥ್, ಖುಷ್ಟಂತ್‌ಸಿಂಗ್ ಎಂಬ ರಸಿಕ ಖುಷಿ, ಇ.ಎಂ.ಎಸ್. ನಂಬೂದರಿಪಾಡ್ ವಿಚಾರಧಾರೆಗಳು, ಮಂಡ್ಯ ನೆಲದ ಗಾಂಧಿ ಕೆ. ವಿ. ಶಂಕರಗೌಡರು, ದಕ್ಷಿಣದ ಗಾಂಧಿ ಕೆ. ಕಾಮರಾಜ ನಾಡಾರ್, ಫಿರೋಜ್ ಗಾಂಧಿ, ಗಾಂಧೀಜಿ ಜೀವ ಉಳಿಸಿದ ಭಿಲಾರೆ ಗುರೂಜಿ, ಪ್ರೊ. ಮಾಧವ ಗಾಡ್ಗೀಳ್, ಬ್ರಾಹ್ಮಣ್ಯವನ್ನು ತೊರೆದ ಗಾಂಧಿವಾದಿ ಎ. ವೈದ್ಯನಾಥ ಅಯ್ಯರ್ ಎಂದು 27 ವಿಭಾಗವಾಗಿ ವಿಂಗಡಿಸಿ ಬರೆಯಲಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...
READ MORE