‘ಬೆಳ್ಳಿ ತೆರೆ ಬಂಗಾರದ ನೆನಪು’ ಶ್ರೀಧರಮೂರ್ತಿ ಅವರ ಕೃತಿ. ಅರಳುವಿಕೆಯ ಕ್ರಿಯೆ ಅಂತರಂಗದ್ದಾದರೇ ಅರಳಿದ ನಂತರ ಅದರ ಗುಣ ಬಹಿರಂಗವಾಗುತ್ತದೆ. ಮೌನ ಮುಖಿಯೂ ಅಷ್ಟೇ, ವಸ್ತು, ವಿಷಯಗಳಲ್ಲಿ ತನ್ನನ್ನು ತಾನು ಸಾಧಿಸಿಕೊಳ್ಳುವ ಅಂತರಂಗದ ಮಂಥನ, ನಂತರ ನವವೀತದ ಬಹಿರಂಗ ದರ್ಶನ. ಅಂದರೆ ಧ್ಯಾನವನ್ನು ಜ್ಞಾನವಾಗಿಸುವ ಭಾವ. ಈ ಭಾವದ ಕಾರಣಕ್ಕಾಗಿ ಎನ್.ಎಸ್. ಶ್ರೀಧರಮೂರ್ತಿ ಅವರು ಕನ್ನಡ ಸಾರಸ್ವತ ಲೋಕದ ಬಹು ಆಯಾಮದ ಲೇಖಕರಾಗಿ ಗುರುತಿಸಲ್ಪಡುತ್ತಾರೆ. ಪ್ರತಿಕಾ ಸಂಪಾದಕರಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ, ವೈಚಾರಿಕ ಬರಹಗಾರರಾಗಿ, ಕಾದಂಬರಿ, ಕವನ, ಕಥೆ, ವ್ಯಕ್ತಿ ಚಿತ್ರ ಈ ಎಲ್ಲ ಆಯಾಮಗಳಲ್ಲಿ ಮನಸ್ಸು ಮತ್ತು ಭಾಷೆಗಳ ಸ್ಪಂದನೋಪಾಸಕರಾಗಿದ್ದು, ಇವರ ಕೃತಿಗಳು ತುಲನೆಯ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತವೆ. ಬೆಳ್ಳಿ ತೆರೆಯ ಬಂಗಾಪರದ ನೆನಪು ಸಿನಿಮಾ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದವರ ಕುರಿತ ಬರಹಗಳ ಸಂಕಲನ. ನಟ-ನಟಿಯರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಗೀತ ರಚನಾಕಾರರು, ಚಿತ್ರಕಥೆ-ಸಂಭಾಷಣೆ ಲೇಖಕರು ಹೀಗೆ ವಿವಿಧ ವ್ಯಕ್ತಿಗಳ ಚಿತ್ರಣವನ್ನು ಸರಳವಾಗಿ ಮನನೀಯವಾಗುವಂತೆ ಮಾಡಿದ್ದಾರೆ.
ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು 'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...
READ MORE