ಸಂಕೇತಿ ಸಮುದಾಯಕ್ಕೆ ಸೇರಿದ ಸ್ವಾತಂತ್ರ್ಯಹೋರಾಟಗಾರರಾದ 12 ಜನರ ಪರಿಚಯ-ಲೇಖನಗಳ ಸಂಗ್ರಹ ‘ಸಂಸಕ್ತ’. ಇವರಲ್ಲಿ ಒಬ್ಬ ಮಹಿಳಾ ಹೋರಾಟಗಾರ್ತಿಯೂ ಸೇರಿದ್ದಾರೆ. ಮಹಾತ್ಮಾಗಾಂಧಿಯವರು ಕೊಟ್ಟ ಕರೆಯಂತೆ ಸಂಕೇತಿ ಸಮುದಾಯದವು ಸಹ ಒಂದಲ್ಲ ಒಂದು ರೀತಿಯಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರ ದಾಖಲಾತಿ ಕೃತಿ ಇದು. ಅದರ ಪೈಕಿ ಲಭ್ಯರಾದ 12 ಜನರನ್ನು ಸಂದರ್ಶಿಸಿಕೊಂಡು ಈ ಕೃತಿಯನ್ನು ರಚಿಸಲಾಗಿದೆ. ಇದಕ್ಕೆ ಬಸವಾನಿ ರಾಮಶರ್ಮರ `ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ' ಎಂಬ ಮುನ್ನುಡಿ ಇದೆ. ಕೃತಿಯನ್ನು ಲೇಖಕ ಪ್ರಣತಾರ್ತಿಹರನ್ ಸಂಪಾದಿಸಿದ್ದಾರೆ.
ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...
READ MORE