ನೀವು ಕಂಡರಿಯದ ಕುದ್ಮುಲ್ ರಂಗರಾವ್

Author : ಬಿ.ಎ. ವಿವೇಕ ರೈ

Pages 144

₹ 180.00




Year of Publication: 2024
Published by: ಬಹುರೂಪಿ
Address: ಬಹುರೂಪಿ ಎಂಬೆಸ್ಸೆ ಸೆಂಟರ್, 111, ಮೊದಲನೆಯ ಮಹಡಿ, ಕ್ರೆಸೆಂಟ್ ರೋಡ್, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು- 560001

Synopsys

`ನೀವು ಕಂಡರಿಯದ ಕುದ್ಮುಲ್ ರಂಗರಾವ್’ ಬಿ.ಎ. ವಿವೇಕ ರೈ ಅವರ ಕೃತಿಯಾಗಿದೆ. ಮಳೆಗಾಲದ ಒಂದು ದಿನ ಪ್ರೇಮಿ ರಾವ್ ಅವರು ತಮ್ಮ ಕುಟುಂಬದ ಹಳೆಯ ಫೋಟೋಗಳನ್ನು ನೋಡುತ್ತಿದ್ದಾಗ ಒಂದು ಹಳೆಯ ಮಸುಕಾದ ಫೋಟೋ ಕಾಣಸಿಕ್ಕಿತು. ಅದು ಅವರ ಪಿಜ್ಜ ಕುದ್ಮುಲ್ ರಂಗರಾವ್ ಅವರದ್ದು, ಅವರು ಕರೆಯುವ ಕುದ್ಮುಲ್ ಪಿಜ್ಜನದ್ದು. ಆದರೆ ಇವತ್ತು ಅವರ ಕುಟುಂಬದಲ್ಲಿಯೇ ಬಹಳ ಮಂದಿಗೆ ಕುದ್ಮುಲ್ ಪಿಜ್ಜನ ಸಾಧನೆಗಳ ಬಗ್ಗೆ ತಿಳಿದಿಲ್ಲ ಎಂದು ಪ್ರೇಮಿ ರಾವ್ ಅವರಿಗೆ ಬೇಸರವಾಯಿತು. ಬಡತನದ ಕುಟುಂಬದಿಂದ ಬಂದ ಅವರು ಹೇಗೆ ದಕ್ಷಿಣ ಕನ್ನಡದ ಜನರ ಆಲೋಚನೆ ಮತ್ತು ಮನಸ್ಥಿತಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಶಕ್ತರಾದರು ಎನ್ನುವುದು ಅವರ ಕುಟುಂಬದವರಿಗೇ ತಿಳಿದಿಲ್ಲ. ಕುದ್ಮುಲ್ ಪಿಜ್ಜನ ಕಾರ್ಯಗಳು ಆ ಪ್ರದೇಶದ ಇತಿಹಾಸದ ಮೇಲೆ ಪ್ರಭಾವ ಬೀರಿ, ಆ ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತಂದುವು. ಕುದ್ಮುಲ್ ರಂಗರಾವ್ ಅವರು ದಲಿತರು ಅಲ್ಲದಿದ್ದರೂ ಅವರು ಮಹಾತ್ಮಾ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರಿಗಿಂತ ಅನೇಕ ವಿಧಗಳಲ್ಲಿ ಪೂರ್ವ ಸಾಧಕರಾಗಿದ್ದರು. ಭಾರತದ ಇತಿಹಾಸದಲ್ಲಿ ಅವರುಗಳ ಬಗ್ಗೆ ಸಾಕಷ್ಟು ಬರಹಗಳು ದೊರೆಯುತ್ತವೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ತನ್ನ ವೃತ್ತಿ ಮತ್ತು ಆಸ್ತಿಯನ್ನು ತ್ಯಜಿಸಿ, ತನ್ನ ಇಡೀ ಬದುಕನ್ನು ಮುಡುಪಾಗಿ ಇಟ್ಟ ಕುದ್ಮುಲ್ ಪಿಜ್ಜ ಪ್ರಚಾರವಿಲ್ಲದ ತೆರೆಮರೆಯ ಸಾಧಕರಾಗಿ ಉಳಿದುಬಿಟ್ಟಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books