‘ಸಹಯೋಗ’ ಹಿರಿಯ ಸಾಹಿತಿ ಶಿವಾನಂದ ಗಾಳಿ ಅವರು ರಚಿಸಿರುವ ವ್ಯಕ್ತಿಚಿತ್ರಗಳ ಸಂಕಲನ. ಆಪ್ತಬರಹಗಳ ಗುಚ್ಛದಂತಿರುವ ಈ ಕೃತಿ ಲೇಖಕರು ಹತ್ತು-ಹಲವು ವರ್ಷಗಳಲ್ಲಿ ಒಡನಾಡಿದ ಹದಿನಾಲ್ಕು ಮಂದಿ ನುಡಿಸೇವಕರ ವ್ಯಕ್ತಿಚಿತ್ರಣಗಳ ಸಂಕಲನ. ನುಡಿಸೇವಕರ ಒಳಹೊರಗನ್ನು ಪದರಪದರವಾಗಿ ಬಿಡಿಸಿಟ್ಟಿರುವ ಪರಿ ಹಾಗೂ ಆ ವ್ಯಕ್ತಿಗಳ ಸಿದ್ಧಿ ಸಾಧನೆಗಳನ್ನು ವಸ್ತುನಿಷ್ಠವಾಗಿ ಅಂತೆಯೇ ಪ್ರಾಂಜಲವಾಗಿ ನಿವೇದಿಸಿರುವ ಬಗೆ ಓದುಗರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಚುಂಬಕಗಳು. ಅದರಲ್ಲೂ ಒಂದೊಂದು ವ್ಯಕ್ತಿಚಿತ್ರಕ್ಕೂ ನೀಡಿರುವ ವಿಶೇಷಣೋಪಾದಿಗಳು ಅವರ ವ್ಯಕ್ತಿತ್ವಗಳ ಸಾರಸರ್ವಸ್ವವನ್ನೇ ಬಿಂಬಿಸುವ ನುಡಿಮುತ್ತುಗಳಂತಿವೆ. ಗಣ್ಯರು ಕನ್ನಡ ನಾಡು-ನುಡಿಯ ಅಪ್ರತಿಮ ಸೇವಕರಾಗಿದ್ದು ಇವರನ್ನು ಕುರಿತ ಬರಹಗಳು ಲೇಖಕರ ಚಿತ್ತಭಿತ್ತಿಯ ಚಿತ್ತಾರಗಳು ಎನ್ನಬಹುದು.
ಹಿರಿಯ ಸಾಹಿತಿ, ಪ್ರಕಾಶನ ಶಿವಾನಂದ ಗಾಳಿ ಅವರು ಮೂಲತಃ ನವಲಗುಂದ ತಾಲ್ಲೂಕಿನ ಗುಡಿಸಾಗರ ಗ್ರಾಮದವರು. ತಂದೆ -ಶಾಂತಪ್ಪ ಹಾಗೂ ತಾಯಿ-ಸುಂದರಮ್ಮ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದರೊಂದಿಗೆ ‘ಮಿರ್ಜಿ ಅಣ್ಣಾರಾಯರ ಬದುಕು-ಸಾಹಿತ್ಯ’ ಕುರಿತು ಡಾ. ಗುರುಲಿಂಗ ಕಾಪಸೆಯವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದ ಅವರು ನರಗುಂದದ ಸಿದ್ಧೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ವತ್ತಿ ಪ್ರಾರಂಭಿಸಿದರು. ನಂತರ ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ರೀಡರ್ ಆಗಿ, ಸಿಲೆಕ್ಷನ್ ಗ್ರೇಡ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ 1999ರಿಂದ 2006ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ...
READ MORE