‘ ಒಡನಾಟ’ ಕೃತಿಯು ಎಸ್.ಆರ್. ವಿಜಯಶಂಕರ ಅವರ ರಚಿಸಿದ ವ್ಯಕ್ತಿಚಿತ್ರಗಳ ಸಂಗ್ರಹವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಬಸವರಾಜ ಕಲ್ಗುಡಿ ಅವರು, ಕಳೆದ ಇಪ್ಪತ್ತಾರು ವರ್ಷಗಳಲ್ಲಿ ಬರೆದ ವ್ಯಕ್ತಿಚಿತ್ರಗಳ ಸಂಗ್ರಹವಾಗಿದೆ. ಇವರಲ್ಲಿ ಅನೇಕರು ಸಾಹಿತ್ಯ, ಸಾಂಸ್ಕೃತಿಕ ಸಂದರ್ಭದ ಗಣ್ಯರು. ಇನ್ನು ಕೆಲವರು ಕೈಗಾರಿಕೆ ಪತ್ರಿಕೋದ್ಯಮಗಳ ಮೂಲಕ ಪರಿಚಿತರಾದವರು. ಮತ್ತೆ ಕೆಲವರು ಬದುಕಲ್ಲಿ ಹೇಗೋ ಬಂದು ನೆನಪಲ್ಲಿ ನಿಂದವರು ಎಂದು ಕೃತಿಯ ಸ್ವರೂಪವನ್ನು ಲೇಖಕರು ವಿವರಿಸಿದ್ದಾರೆ. ದ.ರಾ.ಬೇಂದ್ರೆ, ಬಿ.ಜಿ.ಎಲ್.ಸ್ವಾಮಿ, ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ, ಕೀರ್ತಿನಾಥ ಕುರ್ತಕೋಟಿ ಅವರ ಕುರಿತ ಬರಹಗಳು ಸೇರಿದಂತೆ ಇಪ್ಪತ್ತಾರು ಲೇಖನಗಳು ಕೃತಿಯಲ್ಲಿವೆ. ಈ ಹಿರಿಯರ ಅನನ್ಯ ಸಾಂಸ್ಕೃತಿಕ ಶ್ರೀಮಂತಿಕೆಯ ಪುಟಗಳ ದಾಖಲೆಯೂ ಹೌದು. ‘ಸಣ್ಣ ಪ್ರಸಂಗಗಳನ್ನೂ ಅನೂಹ್ಯವಾದ ಎತ್ತರದಲ್ಲಿ ಚಿಂತಿಸಬಲ್ಲಂತೆ ಮಾಡುವ ವಿಶ್ಲೇಷಣೆಯಿಂದಾಗಿ ಒಂದು ಬೌದ್ಧಿಕ ಮತ್ತು ಮಾನವೀಯ ನೆಲೆಗಳು ಇಲ್ಲಿಯ ಬರಹಗಳಿಗೆ ತಾನೇ ತಾನಾಗಿ ಒದಗಿಬಂದಿದೆ’ ಎಂದಿದ್ದಾರೆ.
©2025 Book Brahma Private Limited.