ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 295ನೇ ಪುಸ್ತಕ ‘ಬೊಟ್ಟಿಕೆರೆ ಪುರುಷೋತ್ತಮ ಪೂಂಜ’. ಅಭಿನವ ವಾಲ್ಮೀಕಿ, ಯಕ್ಷಗಾನ ಸವ್ಯಸಾಚಿ ಹೆಸರಾಗಿರುವ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ತೆಂಕುತಿಟ್ಟು ಯಕ್ಷಗಾನದ ಭಾಗವತ ಮಾತ್ರವಲ್ಲ ಪ್ರಸಂಗಕರ್ತ, ಸಮರ್ಥ ವೇಷಧಾರಿ, ಚೆಂಡೆ-ಮದ್ದಳೆ ವಾದಕರು ಹೌದು. ಅವರೊಬ್ಬ ಉತ್ತಮ ರಂಗ ನಿರ್ದೆಶಕ. ಅವರ ಬದುಕು- ಕಲಾಧಾರನೆ ಬಗ್ಗೆ ಸವಿವರ ಮಾಹಿತಿಯನ್ನು ಲೇಖಕರು ನೀಡಿದ್ದಾರೆ.
ಯುವ ಬರೆಹಗಾರ, ಬಹುಮುಖ ಪ್ರತಿಭೆ ದೀವಿತ್ ಎಸ್. ಕೋಟ್ಯಾನ್ ಪೆರಾಡಿ ಮೂಲತಃ ಮಂಗಳೂರಿನವರು. ಮಂಗಳೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪದವಿ ಪರೀಕ್ಷೆಯಲ್ಲಿ ಪ್ರಥಮ ಬ್ಯಾಂಕ್ ಪಡೆದವರು. ಜತೆಗೆ ಎಂ.ಎ. ಕನ್ನಡ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿ ಕನ್ನಡ ಉಪನ್ಯಾಸರಾಗಿದ್ದಾರೆ. ಜತೆಗೆ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಗಾನ ಗುರುವಾಗಿಯೂ ಕೆಲಸ ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಉಲ್ಲೇಖವಾದ ಪದ್ವಿನಿ ಪ್ರಕರಣಾಧಾರಿತ 'ಪದ್ವಿನಿ ಪದಗ್ನತಿ' ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಯಕ್ಷಗಾನ ಏಕವ್ಯಕ್ತಿ ಪ್ರದರ್ಶನಗಳನ್ನೂ ಕೊಡುತ್ತಾರೆ. ‘ಕವಿಯ ...
READ MORE