ಅನ್ನದಾತರ ಆತ್ಮಕಥೆ-ಲೇಖಕ ಅಂಶಿ ಪ್ರಸನ್ನಕುಮಾರ ಅವರು ಕೃತಿ. ನೂರೊಂದು ಅನ್ನದಾತರ ಯಶೋಗಾಥೆಗಳ ಸಂಕಲನ ಇದು. ಅನ್ನದಾತರ ನೋವು-ನಲಿವುಗಳನ್ನು ಬಿಂಬಿಸುವ ಈ ಕೃತಿಯು , ರೈತ ಸಮೂಹಕ್ಕೆ ಅನುಕರಣೀಯ ಹಾಗೂ ಮಾದರಿಯಾಗಿದೆ.
ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನ ಕುಮಾರ್, ಪ್ರಸ್ತುತ ಕನ್ನಡ ಪ್ರಭಾ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ, ಕೋಟಿ ನೆನಪು ಕೋಟಿ ಓದುಗರ ಆಂದೋಲನ, ಸಮಾಜಮುಖಿ ಶ್ರೀಸಾಮಾನ್ಯರು, ಸಮುದಾಯ ನಾಯಕರು; ಇವು ಪ್ರಮುಖ ಕೃತಿಗಳು. ಬೆಂಗಳೂರು ಪ್ರೆಸ್ ಕ್ಲಬ್ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ. ...
READ MORE