‘ಜಿ.ಬಿ.ವಿಸಾಜಿ’ ರಾಜಕುಮಾರ ಮಾಳಗೆ ಅವರ ಸಂಪಾದಿತ ಕೃತಿಯಾಗಿದ್ದು, ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ನೆನಪಿನ ಮಾಲಿಕೆಯ ವಾಚಿಕೆ 8 ಆಗಿದೆ. ಈ ಕೃತಿಯು ನಾಲ್ಕು ಭಾಗಗಳನ್ನು ಒಳಗೊಂಡಿದ್ದು, ಅದರಲ್ಲಿ ಕಾವ್ಯ, ಕತೆಗಳು, ವಿಚಾರ ಸಾಹಿತ್ಯ, ಜೀವನಚರಿತ್ರೆಗಳನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದವರು ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳಾದ ಜಿ.ಬಿ. ವಿಸಾಜಿಯವರು. ಜಿ.ಬಿ. ವಿಸಾಜಿಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಬೀದರ ಜಿಲ್ಲೆಯಲ್ಲಿ ಕನ್ನಡ ಕಟ್ಟುವುದರ ಜೊತೆ ಸಾಹಿತ್ಯ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ. ಜಿ.ಬಿ. ವಿಸಾಜಿ ಅವರ ಸಮಗ್ರ ಸಾಹಿತ್ಯ ಅಧ್ಯಯನ ಮಾಡಿ ಆಯ್ದ ಭಾಗಗಳನ್ನು ಸಮರ್ಥವಾಗಿ ಹಿಡಿದಿಟ್ಟ ಕಲೆಗೆ ಈ ಕೃತಿಯೇ ಸಾಕ್ಷಿ.
ಲೇಖಕ ರಾಜಕುಮಾರ ಮಾಳಗೆ ಅವರು ಕಲಬುರಗಿ ಜಿಲ್ಲೆಯ ಕಮಲಾಪುರದವರು. ಎಂ.ಎ, ಪಿ. ಎಚ್. ಡಿ ಪದವೀಧರರು. ಇವರು ಕವನ, ಲೇಖನ, ವಿಮರ್ಶೆ ಹಾಗೂ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ ಕೃತಿಗಳು: ಕನ್ನಡ ದಲಿತ ಕವಿ ಕಾವ್ಯ ಸಮೀಕ್ಷೆ ...
READ MORE