ಒಂದಕ್ಕಿಂತ ಹೆಚ್ಚು ನೊಬೆಲ್ ಪಾರಿತೋಷಕಗಳಿಗೆ ಅರ್ಹವಾಗುವಂತಹ ಸಂಶೋಧನೆಗಳನ್ನು ನಡೆಸಿದರೂ ಆ ಬಗ್ಗೆ ಹೆಗ್ಗಳಿಕೆಯನ್ನು ತೋರದೆ, ಅವರ ಧೀಃಶಕ್ತಿಗೆ ಸ್ವದೇಶ-ವಿದೇಶಗಳು ಸೂಕ್ತ ಮನ್ನಣೆಯನ್ನು ನೀಡದಿದ್ದರೂ, ಸಮಚಿತ್ತವನ್ನು ಕಾಪಾಡಿಕೊಂಡು ತಮ್ಮ ಪಾಡಿಗೆ ತಾವು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಹೋದವರು ಸುಬ್ಬರಾವ್. ಅವರು ಅಂದು ಕಂಡುಹಿಡಿದ ಔಷಧಗಳು ಇಂದಿಗೂ ಮನುಕುಲ ಸೇವೆಯಲ್ಲಿದ್ದು, ಸುಬ್ಬರಾವ್ ಅವರ ಬದುಕು-ಸಂಶೋಧನೆ ಕುರಿತು ಲೇಖಕಿ ಹಲವು ಕುತೂಹಲಕಾರಿ ಅಂಶಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE