ಅನುಪಮಾ , ಬೆಸಗರಹಳ್ಳಿ ರಾಮಣ್ಣ , ಕೆ . ವಿ . ಸುಬ್ಬಣ್ಣ , ದೇವರಾಜು ಅರಸು , ಕೃಷ್ಣ ಆಲನಹಳ್ಳಿ , ಸಿದ್ಧಲಿಂಗಯ್ಯ , ರಾಮಕೃಷ್ಣ ಹೆಗಡೆ , ಕಿ . ರಂ . ನಾಗರಾಜ್ , ಪ್ರೊ . ಎಂ . ಡಿ . ನಂಜುಂಡಸ್ವಾ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಪ್ರಮುಖ ವ್ಯಕ್ತಿಗಳ ವ್ಯಕ್ತಿ ಚಿತ್ರವನ್ನು ಲೇಖಕ ಶೂದ್ರ ಶ್ರೀನಿವಾಸ್ ರು ಈ ಕೃತಿಯಲ್ಲಿ ವಿವರಿಸಿದ್ದಾರೆ . ದೇಶ , ಕಾಲವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆಯಾ ಸಂದರ್ಭದಲ್ಲಿ ಬದುಕಿದ ಆದರ್ಶಪ್ರಾಯ ವೈವಿಧ್ಯಮಯ ಜೀವನಗಳನ್ನು ನಾವು ಅಧ್ಯಯನ ಮಾಡವುದು ಉಪಯುಕ್ತವಾಗಿದೆ ಮತ್ತು ಅನಿವಾರ್ಯವು ಕೂಡ . ಆ ನಿಟ್ಟಿನಿಂದ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸವನ್ನು ಸಮೃದ್ಧಗೊಳಿಸಿದವರ ವ್ಯಕ್ತಿ ಚಿತ್ರಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ .
©2025 Book Brahma Private Limited.