ನೆನೆಯುವ ಮುನ್ನ

Author : ಪ್ರದೀಪ ಆರ್.ಎನ್

Pages 200

₹ 180.00




Year of Publication: 2023
Published by: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು
Address: ಸೂಪರ್ ಬಜಾರ್, ಮುಖ್ಯರಸ್ತೆ, ಕಲಬುರಗಿ-585101

Synopsys

`ನೆನೆಯುವ ಮುನ್ನ’ ಪ್ರದೀಪ್ ಆರ್. ಎನ್ ಅವರ ಕೃತಿಯಾಗಿದೆ. ಇದಕ್ಕೆ ಗವಿಸಿದ್ದಪ್ಪ ಎಚ್. ಪಾಟೀಲ ಅವರ ಬೆನ್ನುಡಿ ಬರಹವಿದೆ; ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗೆ ಅನುಸಂಧಾನವನ್ನು ಅನುವಾದದ ಮೂಲಕ ಮಾಡಿಕೊಂಡು ಬರಲಾಗುತ್ತಿದೆ. ಅಂತಹ ಕೆಲಸವನ್ನು ಪ್ರದೀಪ ಆ‌ರ್.ಎನ್. ಅವರು ನೆನೆವ ಮುನ್ನ ಕೃತಿಯ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಮೂವತ್ತೆರಡು ಲೇಖನಗಳಿವೆ. ಪಾಶ್ಚಾತ್ಯ-ಭಾರತೀಯ ಹಲವು ಕೃತಿಗಳು ಅನುವಾದದ ಮೂಲಕ ಕನ್ನಡಕ್ಕೆ ಬಂದ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕೃತಿ. ಕಲೆ-ಲೇಖಕರ ಮೂಲಕ ಧೃಢಪಡಿಸಿದ್ದಾರೆ. ಕನ್ನಡಿಗರ ಹೃದಯ ಶ್ರೀಮಂತಗೊಳಿಸುವ ಅದ್ಭುತವಾದ ಕೃತಿಗಳ ಅವಲೋಕನವಿದೆ. ಅವರ ಪ್ರಮುಖ ಕೃತಿ ಸಾಧನೆಯ ಕುರಿತು ತುಂಬಾ ಪರಿಣಾಮಕಾರಿ ರೀತಿಯಲ್ಲಿ ಸೂಕ್ಷ್ಮವಾಗಿ ಆಯಾ ಕೃತಿ-ಲೇಖಕರ ಅನಾವರಗೊಳಿಸಿದ್ದಾರೆ. ಗೂಗೆಲ್, ಟಾಲ್‌ಸ್ಟಾಯ್, ದಾಸ್ರೋವಾಸ್ಕಿ, ಗಾರ್ಕಿ, ಇಬ್ಬನ್, ಕಾರ್ನಾಡ್‌, ಚೆಕಾಫ್, ಕಾಫ್ಟ್‌, ಅಚಿಬೆ, ಟಾಗೂ‌ರ್, ಅಂಬೇಡ್ಕರ್, ಗಾಂಧಿ, ಲೋಹಿಯಾ, ಕುವೆಂಪು ಮುಂತಾದವರ ಕುರಿತ ತಲಸ್ಪರ್ಶಿ ನೋಟವಿದೆ. ಈ ಕಾರಣದಿಂದ ನೆನೆವ ಮುನ್ನ ಲಂಕೇಶ್‌ರ ಮರೆಯುವ ಮುನ್ನ ನೆನಪಿಸುತ್ತದೆ. ಇಲ್ಲಿಯ ಎಲ್ಲಾ ಬರಹಗಳು ವೈವಿಧ್ಯತೆಯಿಂದ ಕೂಡಿವೆ.

About the Author

ಪ್ರದೀಪ ಆರ್.ಎನ್

ಡಾ.ಪ್ರದೀಪ ಆರ್.‌ ಎನ್‌ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆದು, ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ರಷ್ಯಾದ ಬರಹಗಾರ ಲಿಯೋ ಟಾಲ್‌ಸ್ಟಾಯ್‌ ಅವರ ಸಾಹಿತ್ಯ ಕುರಿತು ಪ್ರೊ. ವಿಕ್ರಮ್‌ ವಿಸಾಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಅಜೀಂ ಪ್ರೇಮ್‌ ಜಿ ಫೌಂಡೇಶನ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಓದು-ಬರಹ ಇವರ ಹವ್ಯಾಸವಾಗಿದೆ. ಸಮಾಜಮುಖಿ, ಹೊಸತು, ಅನಿಕೇತನ, ಅಕ್ಷರ ಸಂಗಾತ, ಬಹುವಚನ ಸಾಹಿತ್ಯ ವಿಮರ್ಶೆ, ಅವಧಿ, ಬುಕ್‌ ಬ್ರಹ್ಮ ಪತ್ರಿಕೆಗಳಲ್ಲಿ ಪ್ರದೀಪ್‌ ಅವರ ಲೇಖನಗಳು ...

READ MORE

Related Books