‘ರಂಗಚೈತ್ರ’ ಲೇಖಕ ಗುಡಿಹಳ್ಳಿ ನಾಗರಾಜ್ ಅವರು ರಂಗಭೂಮಿ ಕಲಾವಿದರ ಕುರಿತು ಬರೆದಿರುವ ಲೇಖನಗಳ ಸಂಕಲನ. ಇಲ್ಲಿ 12 ಲೇಖನಗಳು ಸಂಕಲನಗೊಂಡಿವೆ. ಅವರ ಸಾಧನೆಯ ಹಲವು ಮಗ್ಗಲುಗಳನ್ನು ಆಳವಾಗಿ ಪರಿಚಯ ಮಾಡಿಕೊಂಡು, ಮಾತನಾಡಿಸಿ, ಸಂದರ್ಶನ ಮಾಡಿ, ರಂಗಭೂಮಿಗೆ ಅವರ ವಿಶಿಷ್ಟ ಕೊಡುಗೆ ಏನೆಂಬುದನ್ನು ಖಚಿತವಾಗಿ ನಿಷ್ಕರ್ಷಿಸಿ, ಸಮತೂಕದ ಅಧ್ಯಯನದಿಂದ ಸಮರ್ಪಕವಾಗಿ ಮೌಲ್ಯಮಾಪನ ಮಾಡಿದ ಕಾರಣದಿಂದ ಮೂಡಿಬಂದ ಲೇಖನಗಳು ಈ ಕೃತಿಯಲ್ಲಿವೆ.
ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ...
READ MORE