‘ಸ್ವಾತಂತ್ರ್ಯ ಹೋರಾಟದ ಹೊರಳು ನೋಟ’ ಲೇಖಕ ಶಾಂತಾರಾಮ ನಾಯಕ ಅವರು ರಚಿಸಿರುವ ವ್ಯಕ್ತಿಚಿತ್ರಣಗಳ ಸಂಕಲನ. ಅದರಲ್ಲೂ ವಿಶೇಷವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯಾಭಿಮಾನಿಗಳ ಬದುಕಿನ ಚಿತ್ರಣಗಳು. ತೆರೆಮರೆಯಲ್ಲಿದ್ದು ದೇಶದ ಸ್ವಾತಂತ್ರ್ಯಕ್ಕೆ ದುಡಿದ ಹಲವು ನಾಯಕರ ಬದುಕಿನ ಕುರಿತು ಮುಂದಿನ ತಲೆಮಾರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಈ ಮಹತ್ವದ ಕೃತಿ ರಚಿಸಿದ್ದಾರೆ.
ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡರವರ ಪೂರ್ಣ ಹೆಸರು ಶಾಂತಾರಾಮ ನಾರಾಯಣ ನಾಯಕ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಹಿಚಕಡದಲ್ಲಿ ಸ್ವಾತಂತ್ರ್ಯಯೋಧರ ಕುಟುಂಬದಲ್ಲಿ, 1939 ಮಾರ್ಚ್ 23ರಂದು ಜನಿಸಿದರು. ಇವರು ಹಿಂದಿ ರಾಷ್ಟ್ರಭಾಷಾ ವಿಶಾರದಾ ಪದವಿ ಪಡೆದಿದ್ದಾರೆ. ಜೊತೆಗೆ ಎಂ.ಎ ಪದವಿ, ಹಾಗೂ ಬಿ.ಎಡ್ ಕೂಡಾ ಮಾಡಿದ್ದಾರೆ. ಕೆನರಾ ವೆಲ್‌ಫೇರ್ ಟ್ರಸ್ಟಿನ ಮೊದಲ ಹೈಸ್ಕೂಲ್ ಪಿ .ಎಮ್ . ಹೈಸ್ಕೂಲಿನಲಿ ಸಹಶಿಕ್ಷಕರಾಗಿ 1961ರಲ್ಲಿ ಸೇವೆ ಪ್ರಾರಂಭಿಸಿದ ಅವರು ಮುಂದೆ ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಸಹಶಿಕ್ಷಕರಾಗಿ ಮುಖ್ಯಾಧ್ಯಾಪಕರಾಗಿ ದೀರ್ಘಕಾಲ ಸೇವೆ 1997ರಲ್ಲಿ ನಿವೃತ್ತಿಹೊಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ...
READ MOREಪುಸ್ತಕ ಪರಿಚಯ- ಕೃಪೆ- ಹೊಸತು
ನಮ್ಮ ದೇಶದ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟವು ಒಂದು ಅಚ್ಚಳಿಯದ ನೆನಪಿನ ಭಂಡಾರ, ಮೊಗೆದಷ್ಟೂ ಸಿಗುವ ಪ್ರಾತಃಸ್ಮರಣೀಯ ವ್ಯಕ್ತಿಗಳ, ತ್ಯಾಗ ಬಲಿದಾನಗಳ ಅಪೂರ್ವ ಕಥಾನಕ ಸ್ವದೇಶಕ್ಕಾಗಿ ಸರ್ವಸ್ವವನ್ನು ಕಳೆದುಕೊಂಡರೂ ಎದೆಗುಂದದೆ ಹೋರಾಡಿದ ಸ್ವಾತಂತ್ರ್ಯಾಭಿಮಾನಿಗಳ ವ್ಯಕ್ತಿಚಿತ್ರಣಗಳು ಇಲ್ಲಿವೆ. ತೆರೆಯಮರೆಯಲ್ಲಿದ್ದು ಸತ್ಯಾಗಹಿಗಳಿಗೆ ಸಹಾಯಮಾಡಿದ ಮಹನೀಯರು ಅದೆಷ್ಟೋ ಮಂದಿ ಪ್ರಾಣಾರ್ಪಣೆಯ ಸಂದರ್ಭ ಬಂದರೂ ದೇಶದ್ರೋಹ ಮಾಡದೆ ಹುತಾತ್ಮರಾದ ಹಿರಿಯರ ಬಗ್ಗೆ ನಮಗೆಷ್ಟು ಗೊತ್ತಿದೆ ? ಇಂದಿನ ಯುವಜನತೆ ಇದನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಇಲ್ಲಿ ಪ್ರಸ್ತಾಪಿಸಿದ ಅನೇಕ ಪ್ರಸಂಗಗಳು ನಮ್ಮನ್ನು ಅಚ್ಚರಿಯಿಂದ ಚಿಂತಿಸುವಂತೆ ಮಾಡಿವೆ. ಅವರ ಧೈರ್ಯವನ್ನು ನಾವು ಮೈಗೂಡಿಸಿಕೊಳ್ಳುವಂತೆ ಮಾಡಿವೆ.