`ನಮ್ಮ ಸಾಧಕರು’ ಕೃತಿಯು ಕೆ. ಪುಟ್ಟರಂಗಪ್ಪ ರಚಿಸಿದ್ದಾರೆ. ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯದ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : 'ನಮ್ಮ ಸಾಧಕರು' ಮೂವರು ಮಹನೀಯರನ್ನು ಕುರಿತ ಕೃತಿ, ರೈತಬಂಧು ಚಿ. ಭೈರಪ್ಪಾಜಿ, ಸಹಕಾರ ಧುರೀಣ ಕಲ್ಲೆರೆ ಚಿಕ್ಕೇಗೌಡ ಮತ್ತು ಗಾಂಧೀಮಾರ್ಗಿ ಎಸ್. ಚಿ. ನಂಜೇಗೌಡರ ಜೀವನ ಸಾಧನೆಯನ್ನು ಕುರಿತು ಪ್ರೊ. ಕೆ. ಪುಟ್ಟರಂಗಪ್ಪನವರು ನುಡಿತೋರಣ ಕಟ್ಟಿದ್ದಾರೆ. ಜನಪರವಾಗಿ ಹೋರಾಟ ನಡೆಸಿದ ಈ ಮೂವರು ಸಾಧಕರು ಜನರ ನೆನಪಿನಿಂದ ಮರೆಯಾಗದಂತೆ ಅವರ ಜೀವಿತದ ಕತೆಯನ್ನು ಇಲ್ಲಿ ವಿವರಿಸಲಾಗಿದೆ. ರಾಜ್ಯ ರಾಜಕಾರಣದಲ್ಲಿ ಪ್ರಮುಖ ಹೆಸರು ಚಿ, ಭೈರಪ್ಪಾಜ ಅವರದು, ನೀರಾವರಿಗಾಗಿ ಅವರು ನಡೆಸಿದ ಹೋರಾಟ ಚಿರಸ್ಕರಣೀಯ. ಹಾಗೆಯೇ ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಕಲ್ಲೆರೆ ಚಿಕ್ಕೇಗೌಡರು ಮತ್ತು ಪಾನನಿರೋಧಕ್ಕಾಗಿ ಜೀವಿತದ ಕೊನೆಯವರೆಗೆ ಶ್ರಮಿಸಿದ ಸ್ವಾತಂತ್ರ್ಯಯೋಧ ಎಸ್.ಟಿ. ನಂಜೇಗೌಡರು ಪ್ರಾತಃ ಸ್ಮರಣೀಯರು ಎಂದಿದೆ.
ಕೆ. ಪುಟ್ಟರಂಗಪ್ಪ ಅವರು ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕುಡುವನಘಟ್ಟ ಗ್ರಾಮದವರು. 1957 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವೀಧರರು. ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ 57 ವರ್ಷಗಳ ಬೋಧನಾನುಭವ. ಅಧ್ಯಯನ, ಸಂಶೋಧನೆಯಲ್ಲಿ ಆಸಕ್ತಿ. ಕೃತಿಗಳು ; ವೀರಪಥ, ಮರೆಯಲಾಗದ ಮಹಾನುಭಾವರು, ನಮ್ಮ ಸಾಧಕರು, ಬಡವರಬಂಧು ಬಾಣಸಂದ್ರ ಹುಚ್ಚೇಗೌಡ, ತುಮಕೂರಿನ ವೀರವನಿತೆಯರು. ...
READ MORE