"ಜಿ.ಬಿ.ವಿಸಾಜಿ” ಕೃತಿಯು ವಿಸಾಜಿ ಅವರ ಜೀವನ ಚರಿತ್ರೆಯಾಗಿದ್ದು, ರಾಜಕುಮಾರ ಮಾಳಗೆ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಪರಿಮಿತ ಪ್ರಮಾಣದ ಚೌಕಟ್ಟಿನೊಳಗೆ ಅಪರಿಮಿತವಾದ ವಿಸಾಜಿಯವರ ಚಿಂತನ ಬರಹಗಳ ಸೊಬಗನ್ನು ಸ್ವಾರಸ್ಯವನ್ನೂ ಪ್ರಸ್ತುತ ವಾಚಿಕೆ ಪ್ರಭಾವಿಯಾಗಿ ಬಿಂಬಿಸುವ ಪ್ರಯತ್ನ ಮಾಡಿದೆ. ವಿಸಾಜಿಯವರ ಸಮಗ್ರ ಸಾಹಿತ್ಯದ ವಿಹಂಗಮ ನೋಟವೂ ಇಲ್ಲಿ ಕೊಡಲಾಗಿದೆ. ಅವರ ಸಾಹಿತ್ಯದಲ್ಲಿ ಕೆನೆಗಟ್ಟಿದ ಸವಿಯೂ ಓದುಗರಿಗೆ ದೊರಕಿಸುವ ಇದೊಂದು ಪ್ರಯತ್ನವಾಗಿದೆ.ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.
ಲೇಖಕ ರಾಜಕುಮಾರ ಮಾಳಗೆ ಅವರು ಕಲಬುರಗಿ ಜಿಲ್ಲೆಯ ಕಮಲಾಪುರದವರು. ಎಂ.ಎ, ಪಿ. ಎಚ್. ಡಿ ಪದವೀಧರರು. ಇವರು ಕವನ, ಲೇಖನ, ವಿಮರ್ಶೆ ಹಾಗೂ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ ಕೃತಿಗಳು: ಕನ್ನಡ ದಲಿತ ಕವಿ ಕಾವ್ಯ ಸಮೀಕ್ಷೆ ...
READ MORE