ಲೇಖಕ ಜಯಪ್ರಕಾಶ್ ಪುತ್ತೂರು ಅವರ ಲೇಖನಗಳ ಸಂಗ್ರಹ ‘ಫೇಸ್ ಬುಕ್ ಪ್ರಪಂಚ ಶ್ರೀಸಾಮಾನ್ಯರು ಬಹುಮಾನ್ಯರು’. 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಬಿಡುಗಡೆಯಾದ ಕೃತಿಗಳಲ್ಲಿ ಇದೂ ಒಂದು. ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಲೇಖಕ ಉದಯಕುಮಾರ ಹಬ್ಬು ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ರೊದ್ದಂ ನರಸಿಂಹ, ಶ್ರೀ ದಫೇದಾರ್ ಕೃಷ್ಣಮೂರ್ತಿ, ಇನ್ನ ರಾಮಮೋಹನ್ ರಾವ್, ಡಾ. ಭಾಸ್ಕರ್ ಆಚಾರ್, ಕು.ಗೋ, ಎಮ್, ಬಾಲಕೃಷ್ಣ, ಜಿ.ಎಸ್.ಭಟ್, ಯಾಕೂಬ್ ಗುಲ್ವಾಡಿ, ಕಡಮಜಲು ಸುಭಾಷೆ ರೈ, ದಿ.ಡೆನ್ನಿಸ್ ಡಿಸೋಜ ಸೇರಿದಂತೆ 58 ಮಂದಿ ಸಾಧಕರ ಬಗೆಗಿನ ವ್ಯಕ್ತಿ ಚಿತ್ರಣವನ್ನು ಈ ಕೃತಿಯ ಮೂಲಕ ನೀಡಲಾಗಿದೆ.
ಜಯಪ್ರಕಾಶ್ ಪುತ್ತೂರು ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದರು. ನಂತರ ಅದನ್ನು ರಕ್ಷಣಾವಲಯದ ಪ್ರತಿಷ್ಠಿತ ಎ.ಡಿ.ಎ ಮತ್ತು ಡಿ.ಆರ್.ಡಿ.ಓ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದ ಉದ್ಯೋಗಕ್ಕೆ ಸೇರಿದರು. ರಕ್ಷಣಾ ವೈಮಾನಿಕ ಅಭಿವೃದ್ಧಿ ಸಂಶೋಧನೆಗಳಿಗೆ ಮೀಸಲಾದ ಎಡಿಎ ಕೆಲಸದಲ್ಲಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನಿಕಟವಾಗಿ ಕೆಲಸ ಮಾಡಿದ್ದು ಅವರ ಹೆಗ್ಗಳಕೆ. ‘ಕಲಾಂ ಜೀವನ ಧರ್ಮ’, ‘ಅಗ್ನಿಯ ರೆಕ್ಕೆಗಳು’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE