ಮನಸ್ಸು ಎಂದರೇನು? ಮನಸ್ಸು ಬುದ್ಧಿ ಭಾವಗಳ ನಡುವಣ ಸಂಬಂಧಗಳೇನು? ವರ್ತನೆ ಎಂದರೇನು? ನಮ್ಮ ವರ್ತನೆಯ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು? ಬುದ್ಧಿಶಕ್ತಿ ಹಾಗೂ ಸೃಜನಶೀಲತೆ ನಡುವೆ ಸಂಬಂಧವಿದೆಯೇ? ನಮ್ಮಲ್ಲಿ ಕೆಲವರು ಅಸಾಧಾರಣ ಬುದ್ಧಿವಂತರು ಮತ್ತೆ ಕೆಲವರು ವಿಕಲಚೇತನರು. ಈ ತಾರತಮ್ಯವೇಕೆ? ಮನೋಲೋಕದ ಜಿಜ್ಞಾಸೆಯಲ್ಲಿ ಪ್ರಶ್ನೆಗಳ ಮೆರವಣಿಗೆ ಸಾಲು ಸಾಗುತ್ತದೆ. ಇವನ್ನೆಲ್ಲ ಎಳೆ ಎಳೆಯಾಗಿ ಬಿಡಿಸಿ ಸೂಕ್ತ ಕ್ರಮದಲ್ಲಿ ಅರ್ಥೈಸುವವರು ಮನೋವಿಜ್ಞಾನಿಗಳು.
ಕಳೆದ ಒಂದು ಶತಮಾನದಲ್ಲಿ ಮನೋವಿಜ್ಞಾನಿಗಳು ಅವಲೋಕನ, ಸಮೀಕ್ಷೆ, ಪ್ರಯೋಗ, ವ್ಯಕ್ತಿ ಅಧ್ಯಯನ ಮನೋವಿಶ್ಲೇಷಣೆ, ಸ್ವಪ್ನ ವಿಶ್ಲೇಷಣೆ ಮುಂತಾದ ವಿಧಾನಗಳ ಮೂಲಕ ನಿಗೂಢತೆಯ ತೆರೆ ಸರಿಸಿ ಪ್ರಜ್ಞೆ ಮತ್ತು ಪರಿಸರವನ್ನು ಖಚಿತವಾಗಿ ಗ್ರಹಿಸುವ ಅನಂತ ದಾರಿಗಳನ್ನು ಅನಾವರಣಗೊಳಿಸಿರುವ ಶಿಕ್ಷಣ ಮನೋವಿಜ್ಞಾನಿಗಳ ಕುರಿತ ಪರಿಚಯ ನಿಮಗೆ ಸಿಗುತ್ತದೆ.
ಗಾರ್ಡನರ್, ಸ್ಟರ್ನ್‌ಬರ್ಗ್, ಕೋಲ್‌ಬರ್ಗ್,ಪಿಯಾಜೆ, ಬ್ರೂನರ್, ಫ್ರಾಯ್ಡ್, ಬಂಡೂರ ಮೊದಲಾದ ಇಪ್ಪತ್ತೊಂದು ಮನೋವಿಜ್ಞಾನಿಗಳು ನಡೆಸಿದ ಪ್ರಯೋಗಗಳು, ಮಾಡಿದ ಸಾಧನೆ ಹಾಗೂ ರೂಪಿಸಿದ ಸಿದ್ಧಾಂತಗಳನ್ನು ತಿಳಿಸಲಾಗಿದೆ.
(ಹೊಸತು, ಮಾರ್ಚ್ 2013, ಪುಸ್ತಕದ ಪರಿಚಯ)
ಮನುಷ್ಯನ ನಡವಳಕೆಗೆ ಆತನ ಸುತ್ತಲ ಪರಿಸರ ಎಷ್ಟು ಪ್ರಭಾವ ಬೀರಬಲ್ಲದು ? ಒಂದೇ ಪರಿಸರದಲ್ಲಿದ್ದರೂ ಒಂದೇ ಕುಟುಂಬದವರಾಗಿದ್ದರೂ ವರ್ತನೆಗಳಲ್ಲಿ ಭಿನ್ನತೆ ಇರುವುದೇಕೆ ? 'ಆತನಿಗೆ ಗಳಿಗೆಗೊಂದು ಬುದ್ದಿ' ಎಂದು ಆರೋಪಿಸುವುದಕ್ಕೆ 'ಆತ'ನ ಅಪರಾಧವಾದರೂ ಏನು ? ಮನಸ್ಸು – ಬುದ್ದಿ - ಭಾವನೆಗಳು ಒಂದಕ್ಕೊಂದು ಪೂರಕವೆ? ಮನಸ್ಸಿಗೆ ಬಂದಂತೆ ವರ್ತಿಸುವುದು ಸರಿಯೆ - ತಪ್ಪೇ ? ಮಾನವಕುಲದ ಈ ಮನೋಲೋಕದ ವ್ಯವಹಾರಗಳನ್ನು ಅರ್ಥೈಸುವುದು ಮತ್ತು ಇದು ಹೀಗೆಯೇ ಎಂದು ಗೆರೆ ಎಳೆದಂತೆ ನಿರ್ಣಯಿಸುವುದು ಯಾರಿಂದಲೂ ಸಾಧ್ಯವಿಲ್ಲ. ಇಂಥ ಮನೋವಿಜ್ಞಾನದ ನಿಗೂಢತೆಯನ್ನು ಬೆಂಬತ್ತಿ ಕಾರಣಗಳನ್ನು ಹುಡುಕಿ ಇದರಲ್ಲಿ ಮೆದುಳಿನ ಪಾತ್ರ ಹಿರಿಯದೆಂದು ಅನೇಕ ಮನೋವಿಜ್ಞಾನಿಗಳು ಗುರುತಿಸಿದ್ದಾರೆ. ಸರಿಯಾದ ವಯಸ್ಸಿನಲ್ಲಿ ಸರಿಯಾದ ಸರಿಯಾದ ಶಿಕ್ಷಣದ ಶಿಕ್ಷಣದ ಮೂಲಕ ಮನೋ ವರ್ತನೆಗಳನ್ನು
ನಿಯಂತ್ರಿಸಬಹುದೆಂದು ಕಂಡುಕೊಂಡಿದ್ದಾರೆ. ಹೀಗೆ ಶೈಕ್ಷಣಿಕ ಮನೋವಿಜ್ಞಾನವನ್ನು ಪ್ರಚುರಪಡಿಸಿದ ಮನೋವಿಜ್ಞಾನಿಗಳ ಸಾಲೇ ಪ್ರಪಂಚದಾದ್ಯಂತ ಇದೆ. ವಿಜ್ಞಾನ ಕ್ಷೇತ್ರಕ್ಕೆ ಇವರ ಸಂಶೋಧನೆಗಳಿಂದ ಹೊಸ ಬೆಳಕು ಚೆಲ್ಲಿದಂತಾಗಿದೆ. ಈ ಮನೋವಿಜ್ಞಾನಿಗಳನ್ನು ಅವರು ಮಾಡಿದ ಸಾಧನೆಗಳೊಂದಿಗೆ ಅವರು ನಡೆದ ದಾರಿಯನ್ನು ಪರಿಚಯಿಸಲಾಗಿದೆ. ಪ್ಲಾಂ... ಮನೋವ್ಯಾಪಾರದ ಇವರು ಭೇದಿಸಿದ ಸಂಗತಿಗಳು ಈ ಎಲ್ಲ ವಿಜ್ಞಾನಿಗಳ ಒಮ್ಮತದ ನಿರ್ಧಾರವೇನೂ ಅಲ್ಲ! ಇ ವಿಭಿನ್ನತೆಗಳಿವೆ - ಓದಿ ನೋಡಿ.
©2024 Book Brahma Private Limited.