'ದೀಪ್ತಿಮಂತರುʼ ಜೀವನಚರಿತ್ರೆ ಕೃತಿಯನ್ನು ಲೇಖಕ ಎಸ್.ಆರ್. ರಾಮಸ್ವಾಮಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಪತ್ರಿಕೋದ್ಯಮ, ಪಾರಂಪರಿಕ ಶಾಸ್ತ್ರಾಧ್ಯಯನ, ಸಮಾಜಜಾಗೃತಿ, ಸಂಗೀತ, ನೃತ್ಯ ಮೊದಲಾದ ಕ್ಷೇತ್ರಗಳನ್ನು ಪ್ರಜ್ವಲಗೊಳಿಸಿದ ಹಲವರು ಹಿಂದಿನ ಪೀಳಿಗೆಯ ಅಸಾಮಾನ್ಯ ಮಹನೀಯರ ಉನ್ನತ ಸಾಧನೆಗಳ ಸ್ಮರಣೆಯನ್ನು ಈಗಿನ ಮತ್ತು ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರಯತ್ನವನ್ನು ಈ ಪ್ರಬಂಧಗಳಲ್ಲಿ ಕಾಣಬಹುದು.ಸಮಾಜಾಭ್ಯುದಯಕ್ಕಾಗಿ ಧ್ಯೇಯೋನ್ಮುಖರಾಗಿ ಅವಿರತವಾಗಿ ಶ್ರಮಿಸಿ ಹೆಜ್ಜೆಗುರುತುಗಳನ್ನು ಉಳಿಸಿಹೋದವರು ಈ ಸಾಧಕರು. ಪ್ರತಿಕೂಲ ಪರಿಸರವನ್ನು ಲೆಕ್ಕಿಸದೆ ಅನನ್ಯ ಸಾಧನೆ ಮಾಡಿದ ಇಂತಹವರ ಸ್ಮರಣೆ ಅಭ್ಯುದಾಯಸಕ್ತಿಗೆ ಸದಾ ಸ್ಫೂರ್ತಿಪ್ರದವಾಗಿರುತ್ತದೆ. ವರ್ಷಗಳು ಕಳೆದಂತೆ ಇಂತಹ ಶ್ರೇಷ್ಠರ ಪ್ರಯಾಸಗಳು ವಿಸ್ಮರಣೆಗೊಳಗಾಗುವ ಸಂಭವವಿರುವುದಿಂದ ಅವರ ಜೀವನವೃತ್ತಗಳನ್ನು ಸ್ವಲ್ಪ ಮಟ್ಟಿಗಾದರೂ ದಾಖಲೆ ಮಾಡಿಡುವ ಅಗತ್ಯವಿದೆ. ಈ ಆಶಯದಿಂದ ಮೂಡಿರುವ, ಸ್ವತಃ ಲೇಖಕರ ದೀರ್ಘಕಾಲದ ಒಡನಾಟ ಹೊಂದಿರುವ ಆರು ವ್ಯಕ್ತಿಚಿತ್ರಣಗಳ ಸಂಕಲನ – ’ದೀಪ್ತಿಮಂತರು’.
©2024 Book Brahma Private Limited.