‘ನ್ಯಾಯವಾದಿ ಗುಂಡಯ್ಯ ಶ್ರೇಷ್ಠಿ’ ಕೃತಿಯು ದಿವಂಗತ ಗುಂಡಯ್ಯ ಶ್ರೇಷ್ಠಿ ಅವರ. ಈ ಕೃತಿಯ ಲೇಖಕ ರಾಜಾ ಶೈಲೇಶಚಂದ್ರ ಗುಪ್ತ. ಇಲ್ಲಿ ಗುಂಡಯ್ಯ ಶ್ರೇಷ್ಠಿ ಅವರ ಬಹುಮುಖ ಜೀವನ ಚರಿತ್ರೆಯನ್ನು ಇಲ್ಲಿ ನೀಡಲಾಗಿದೆ. ಸಮಾಜಸೇವೆ, ಸಂಸ್ಕೃತಿ ಪ್ರಸಾರ, ವೇದ ವೇದಾಂಗಗಳ ಪ್ರತಿಪಾದನೆ ವೇದಪಾಠಶಾಲೆ, ಉಚಿತ ವಸತಿ ಗೃಹ, ಆರೋಗ್ಯ ಕೇಂದ್ರ, ದೇವಸ್ಥಾನಗಳು, ವಾಸವಿ ಪೀಠ, ವಾಸವಿ ವೃದ್ಧಾಶ್ರಮ ಇತ್ಯಾದಿಗಳ ಸ್ಥಾಪನೆ ನಿರ್ವಹಣೆ ಹೀಗೆ ನಾನಾ ದಿಕ್ಕಿನಲ್ಲಿ ನೂರಾರು ಉಪನ್ಯಾಸಗಳನ್ನು ನೀಡಿದ್ದು; ಧಾರ್ಮಿಕ ಕ್ಷೇತ್ರಗಳಲ್ಲಿ ಅಗಣ್ಯ ಸೇವೆಯನ್ನು ಅವಿರತವಾಗಿ ಸಲ್ಲಿಸುತ್ತಾ; ವೇದಾಧ್ಯಯನ, ವೈದಿಕ ಕಲಾಪಗಳ ಅನುಷ್ಠಾನಗಳು ತಮ್ಮದೇ ಜನಾಂಗದ ಹಕ್ಕು ಬಾದ್ಯತೆಗಳನ್ನು ಸಂರಕ್ಷಿಸಿಕೊಳ್ಳುವಲ್ಲಿ ಸಫಲವಾಗಿದೆ ಎಂಬುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ.
ರಾಜಾ ಶೈಲೇಶಚಂದ್ರ ಗುಪ್ತ ಮೂಲತಃ ಬೆಂಗಳೂರಿನವರು. ವೃತ್ತಿಯಲ್ಲಿ ಪತ್ರಕರ್ತರು. ಕೃತಿಗಳು: ನ್ಯಾಯವಾದಿ ಗುಂಡಯ್ಯ ಶ್ರೇಷ್ಠಿ ...
READ MORE