ಪ್ರಾಚೀನ ಕಾಲದಿಂದಲೂ ಮಹಿಳೆಯರು ರಾಜ್ಯಾಂಗ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವುದು ಕಾಣುತ್ತೇವೆ. ಚಕ್ರವರ್ತಿನಿಯರು, ರಾಣಿ, ಮಹಾರಾಣಿಯರು ಆಡಳಿತ ಸೂತ್ರವನ್ನು ಕೈಗೆತ್ತಿಕೊಂಡು ತಮ್ಮ ದೇಶದ ರಕ್ಷಣೆಗೆ ಹಾಗೂ ದೇಶದ ವಿಸ್ತರಣೆಗೆ ಅನ್ಯ ದೇಶಗಳೊಂದಿಗೆ ಯುದ್ಧಗಳನ್ನು, ಒಪ್ಪಂದಗಳನ್ನು ನಡೆಸುತ್ತಿದ್ದರು. ಅವರು ಸ್ವತಃ ಯುದ್ಧಭೂಮಿಗೆ ಇಳಿದು ಕಾದಾಡಿದ ಪ್ರಸಂಗಗಳು ಇವೆ. ಶೂರತ್ವ, ದೇಶಭಕ್ತಿ, ಮತ್ತು ತ್ಯಾಗ ಮನೋಭಾವದಿಂದ ಧೀರೋದಾತ್ತ ಜೀವನವನ್ನು ನಡೆಸಿದ ಸುಪ್ರಸಿದ್ಧ ರಾಣಿಯರಾದ ಟ್ರಾಯ್ ನಗರದ ಹೆಲೆನ್, ಈಜಿಪ್ತಿನ ಚಕ್ರವರ್ತಿನಿ ಕ್ಲಿಯೋಪಾತ್ರ, ಹೊಯ್ಸಳ ರಾಣಿ ಶಾಂತಲಾ, ಸ್ಪೇನ್ ದೇಶದ ಇಸಬೆಲ್ಲಾ, ಯುಗ ಪ್ರವರ್ತಕಿ ಎಲಿಜಬೆತ್, ಶೂರ ಯೋಧರಾಣಿ ಚಾಂದಬೀಬಿ.. ಹೀಗೆ ಒಟ್ಟು ಹದಿನೈದು ರಾಣಿಯರ ವೈಯಕ್ತಿಕ ವಿವರ ಹಾಗೂ ಸಾಧನೆ ಆಧರಿಸಿ ರಚಿಸಿದ ಸಂಕ್ಷಿಪ್ತ ವ್ಯಕ್ತಿಚಿತ್ರಗಳ ಸಂಗ್ರಹ ಈ ಗ್ರಂಥವಾಗಿದೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE