‘ಅಮೂಲ್ಯ ರತ್ನಗಳು’ ಎಲ್.ಪಿ.ಕುಲಕರ್ಣಿ ಅವರ ರಚನೆಯ ವಿಶ್ವ ಶ್ರೇಷ್ಟರ ಜೀವನ ಸಾಧನೆಯಾಗಿದೆ. ಇಲ್ಲಿ ವಿಶ್ವಶ್ರೇಷ್ಠ ಗುರು ರಾಮಕೃಷ್ಣ ಪರಮಹಂಸ, ಸರಳತೆಯ ಸಾಕಾರಮೂರ್ತಿ ನಮ್ಮ ಬಾಪೂಜಿ, ಟ್ಯಾಗೋರರನ್ನು ಮರೆಯಲು ಸಾಧ್ಯವೇ?. ಹೀಗೆ ಕೆಲವು ದಾರ್ಶನಿಕರು, ಸಮಾಜ ಸುಧಾರಕರ ಲೇಖನಗಳಿದ್ದರೆ, ವಿಜ್ಞಾನದ ಅದ್ಭುತ ಪ್ರತಿಭೆ, ವಿಜ್ಞಾನಿ ಮೇಡಮ್ ಕ್ಯೂರಿ, ಭಾರತದ ಬಾಹ್ಯಾಕಾಶ ಯೋಜನೆಗಳ ಜನಕ ವಿಕ್ರಂ ಸಾರಾಭಾಯ್ ಮುಂತಾದ ವಿಜ್ಞಾನಿಗಳು; ಗಣಿತದ ಅನಂತತೆ ಕಂಡಿದ್ದ ಶ್ರೀನಿವಾಸ ರಾಮಾನುಜನ್, ಸಸ್ಯ ರಾಮಾನುಜನ್ ಪ್ರಶಸ್ತಿ ಪುರಸ್ಕೃತ ಹಾಡಮ್ ಹಾರ್ಪರನ್ನೇ ಒಳಗೊಂಡ ಗಣಿತಜ್ಞರಿದ್ದಾರೆ. ನನ್ನ ಧ್ವನಿಯೇ ನನ್ನ ಅಸ್ಮಿತೆ ಎಂಬುದಕ್ಕೆ ಅನ್ವರ್ಥ ಲತಾ, ಬಾಲಿವುಡ್‌ನ 'ಬಿಗ್ ಬಿ' ಗೆ ಪ್ರಶಸ್ತಿಯ ಗರಿ ಹಾಗೆಯೇ ಕಾರ್ಗಿಲ್ ವೀರಯೋಧ ಕ್ಯಾಪ್ಟನ್ ನವೀನ್ ನಾಗಪ್ಪ, 'ಜೀವನ ದೊಡ್ಡದಾಗಿರಬೇಕೆ ಹೊರತು ದೀರ್ಘವಾಗಿರಬಾರದು' ಎಂದು ಹೇಳಿದ ಯೋಧ ಕಪಿಲ್ ಖುಂಡು ಅವರನ್ನೊಳಗೊಂಡ ಯೋಧರ ಸಾಹಸಗಾಥೆಗಳು ಹೀಗೆ ಹಿಂದಿನ ತಲೆಮಾರಿನ ಕೆಲವು ಸಾಧಕರನ್ನು ಒಳಗೊಂಡಂತೆ ಈಗಿರುವ ಸಾಧಕರ ಜೀವನವನ್ನು ಇಂದಿನ ವಿದ್ಯಾರ್ಥಿ ಸಮೂಹ, ಯುವಪೀಳಿಗೆಗೆ ತಿಳಿಸುವ ಒಂದು ಚಿಕ್ಕ ಪ್ರಯತ್ನ ಈ ಅಮೂಲ್ಯ ರತ್ನಗಳು ಪುಸ್ತಕದ್ದು.
©2025 Book Brahma Private Limited.