ಡಾ. ವಿಶ್ವಾಸ ಅವರ ಕೃತಿ-ಇದ್ದರಿಂಥವರೆಮ್ಮ ನಡುವಲಿ. ಲೇಖಕರು ಹೇಳುವಂತೆ ‘ಇಲ್ಲಿ ಚಿತ್ರಿಸಿರುವ ಎಲ್ಲರನ್ನು ವೈಯಕ್ತಿಕವಾಗಿಯೂ ನಾನು ಬಲ್ಲೆ. ಕೆಲವರೊಂದಿಗೆ ನನ್ನ ಹೆಚ್ಚಿನ ಒಡನಾಟವೂ ಇತ್ತು. ಖಂಡಿತವಾಗಿಯೂ ಅವರಲ್ಲಿ ಪ್ರತಿಯೋರ್ವ ವ್ಯಕ್ತಿಯೂ ಸಾಧನೆಯಲ್ಲಿ ಮೇರು ಪರ್ವತವೇ ! ಇಲ್ಲಿ ನಿರೂಪಿತವಾಗಿರುವ ಅವರ ವೈಯಕ್ತಿಕ ಬದುಕಿನ ಸಣ್ಣಪುಟ್ಟ ಅಂಶಗಳು ಖಂಡಿತವಾಗಿಯೂ ಮಹತ್ತ್ವಪೂರ್ಣವಾದವು. ಇಂಥದೊಂದು ಬರವಣಿಗೆಯ ಪ್ರಯತ್ನ ನಡೆಯದಿರುತ್ತಿದ್ದರೆ ಅವೆಲ್ಲ ಎಲ್ಲೂ ದಾಖಲೆಯಾಗದೆ ಕಾಲಗರ್ಭದಲ್ಲಿ ಮರೆಯಾಗಿ ಬಿಡುತ್ತಿದ್ದವೇನೋ ! ಈ ದೃಷ್ಟಿಯಿಂದ ಈ ಪುಸ್ತಕಕ್ಕೆ ಹೆಚ್ಚಿನ ಮಹತ್ತ್ವವಿದೆ’ ಎಂದು ಕೃತಿಯ ಕುರಿತು ಅಭಿಪ್ರಾಯಪಟ್ಟಿದ್ದಾರೆ.
‘ಇದ್ದರಿಂಥವರೆಮ್ಮ ನಡುವಲಿ’ ಎಂಬ ಹೆಸರು ಸ್ವಲ್ಪ ಉದ್ದವಾಯ್ತು, ಉಚ್ಚರಿಸಲೂ ಸ್ವಲ್ಪ ಕಷ್ಟವಾಗಬಹುದು ಎಂದು ಕೆಲವರ ಅಭಿಪ್ರಾಯ. ಅದು ನಿಜವೂ ಇರಬಹುದು. ಆದರೆ ಇದೇ ಕಾರಣದಿಂದಾಗಿ ನನ್ನ ಹಿಂದಿನ ಪುಸ್ತಕವೊಂದರ ಶಿರೋನಾಮವನ್ನು ಬದಲಾಯಿಸಿ ಮತ್ತೆ ಪಶ್ಚಾತ್ತಾಪ ಪಟ್ಟುಕೊಂಡೆ. ಈ ಸಲ ಹಾಗಾಗಬಾರದೆಂದೇ ಪದ್ಯಗಂಧಿಯೂ ಆಗಿರುವ ಇದೇ ಹೆಸರನ್ನು ಉಳಿಸಿಕೊಂಡಿರುವೆ. ‘ಇದೇ ಸುಂದರವಾಗಿದೆ. ಹೀಗೆಯೇ ಇರಲಿ’ ಎಂದು ಕೆಲವು ಗೆಳೆಯರೂ ಹೇಳಿದ್ದಾರೆ’ ಎನ್ನುವ ಮೂಲಕ ಓದುಗರ ಗಮನ ಸೆಳೆದಿದ್ದಾರೆ.
ಮಲೆನಾಡಿನ ಕೊಪ್ಪ ತಾಲೂಕಿನ ಹುಲಿಯಾಳಿ ಗ್ರಾಮದ ವಿಶ್ವಾಸ ಅವರು ಸಂಸ್ಕೃತ ವಿದ್ವಾಂಸರು. ಎಂ.ಎ. ಮತ್ತು ಪಿ.ಹೆಚ್.ಡಿ. ಪದವೀಧರರು. ಸಂಸ್ಕೃತ - ಕನ್ನಡ ಎರಡೂ ಭಾಷೆಗಳಲ್ಲಿ ಕೃಷಿ ಮಾಡಿದ್ದಾರೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ‘ದಾಟು’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಉತ್ತರಪ್ರದೇಶ ಸಂಸ್ಕೃತ ಅಕಾಡೆಮಿ ಹಾಗೂ ಸಂಸ್ಕೃತದಲ್ಲಿ ಬಾಲಸಾಹಿತ್ಯಕ್ಕಾಗಿಯೂ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದಲೂ ಪುರಸ್ಕೃತರಾಗಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ‘ವಾಚಸ್ಪತಿ’ (ಡಿ.ಲಿಟ್) ಪದವೀಧರರು. ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ...
READ MORE