ಬದ್ಧತೆ ಎನ್ನುವುದು ಬಂಧನ

Author : ಎಂ.ಎಸ್. ಶ್ರೀರಾಮ್

Pages 200

₹ 324.00




Year of Publication: 2024
Published by: ಬಹುವಚನ
Address: ಬಹುವಚನ ನಂ 61, ಸುಕೃತ, ದೇಸಾಯಿ ಗಾರ್ಡನ್ಸ್, ವಸಂತಪುರ ಮುಖ್ಯ ರಸ್ತೆ ಬೆಂಗಳೂರು- 560062

Synopsys

‘ಬದ್ಧತೆ ಎನ್ನುವುದು ಬಂಧನ’ ಎಂ. ಎಸ್. ಶ್ರೀರಾಮ್ ಅವರ ಸಂದರ್ಶನಗಳ ಸಂಕಲನವಾಗಿದೆ. ಇದಕ್ಕೆ ಕೆ.ವಿ. ತಿರುಮಲೇಶ್ ಅವರ ಬೆನ್ನುಡಿ ಬರಹವಿದೆ; ಕನ್ನಡ ಸಾಹಿತ್ಯದಲ್ಲಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ ನಿಜ - ಪ್ರಬಂಧಗಳು, ಲೇಖನಗಳು, ಸಾಹಿತ್ಯ ವಿಮರ್ಶೆ, ಜನಪ್ರಿಯ ವಿಜ್ಞಾನದ ಬಗ್ಗೆಯೂ ಬರೆದಿದ್ದೇನೆ. ನಾನು ತಿಂಗಳ, ವಾರದ ಅಂಕಣಗಳನ್ನು ಬರೆದೆ. ಕಥೆ, ಕಿರುಕಾದಂಬರಿಗಳು ಮತ್ತು ನೀವು ಹೇಳಿದಂತೆ ಇತ್ತೀಚೆಗೆ ಒಂದು ನಾಟಕವನ್ನೂ ಬರೆದೆ. ಆದರೆ ಈ ಎಲ್ಲದರಲ್ಲೂ ನನಗೆ ತುಂಬಾ ಸಂತೋಷವನ್ನು ನೀಡಿದ ಕೆಲಸವೆಂದರೆ ಪದ್ಯ ಬರೆಯುವುದು. ಆದರೆ ಕಾವ್ಯರಚನೆ ಆತಂಕದ ಕೆಲಸವೂ ಹೌದು. ಇದು ನಮ್ಮ ಆಂತರ್ಯವನ್ನು ಬಗೆಯುವ ಕೆಲಸ. ಇದು ಸೂಕ್ಷ್ಮ- ಸಂವೇದನಾಶೀಲ ಕೆಲಸ.

About the Author

ಎಂ.ಎಸ್. ಶ್ರೀರಾಮ್
(16 May 1962)

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ಅವರು ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಡಾಕ್ಟರೇಟ್ ಪಡೆದರು. ಆಮೇಲೆ ಆನಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದ್ ನ ಬೇಸಿಕ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರ್ ...

READ MORE

Related Books