‘ಗಳಗನಾಥ ಮಾಸ್ತರ’ ಶ್ರೀನಿವಾಸ ಹಾವನೂರ ಅವರು ಬರೆದಿರುವ ನುಡಿಚಿತ್ರಣವಾಗಿದೆ. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತು ಸಮ್ಮೇಳನದಲ್ಲಿ ಬಿಡುಗಡೆಗೊಂಡ ಈ ಕೃತಿಯು ಗಳಗನಾಥರ ಜೀವನ ಚಿತ್ರಣವನ್ನು ತಿಳಿಸುತ್ತದೆ. ಗಳಗನಾಥ ಮಾಸ್ತರರ ಹೆಸರು ಕನ್ನಡಿಗರೆಲ್ಲರಿಗೂ ರೋಮಾಂಚನ ತರುವಂತಹದ್ದು. ಬರಹಗಾರರಾಗಿ ಅದನ್ನು ತಲೆ ಮೇಲೆ ಹೊತ್ತು ಮನೆ ಮನೆಗೆ ತಲುಪಿಸಿದ ಆದರ್ಶ ಪ್ರಕಾಶಕರೂ ಹೌದು. ಜೊತೆಗೆ ಮಾರಾಟಗಾರರಾಗಿ, ಕಲಿಕೆಯ ಚಳುವಳಿ ಇನ್ನು ಕನ್ನಡ ನಾಡಿನಲ್ಲಿ ಹರಡುತ್ತಿದ್ದ ಕಾಲದಲ್ಲಿ ಆದರ್ಶ ಶಿಕ್ಷಕರಾಗಿ ‘ಗಳಗನಾಥ ಮಾಸ್ತರ’ ಎಂದೇ ಹೆಸರಾದ ಅವರ ಕುರಿತು ಶ್ರೀನಿವಾಸ ಹಾವನೂರ ಅವರು ಬರೆದ ನುಡಿಚಿತ್ರಣ ಓದುಗರಿಗೆ ಇಲ್ಲಿ ಮುಖ್ಯವೆನ್ನಿಸುತ್ತದೆ.
ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು. ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...
READ MORE