ಜಾನಪದ ವಿದ್ವಾಂಸ ಎ.ವಿ. ನಾವಡ ಅವರು ಪ್ರಮುಖ ಸಂಶೋಧಕರಲ್ಲಿ ಒಬ್ಬರು. ನವೋದಯ ಸಾಹಿತ್ಯದ ಆರಂಭದ ದಿನಗಳು ಹಾಗೂ ಕ್ರೈಸ್ತ ಮಿಶಿನರಿಗಳು ಕನ್ನಡಕ್ಕೆ ನೀಡಿದ ಕೊಡುಗೆಯ ಬಗ್ಗೆ ಅಧ್ಯಯನ ನಡೆಸಿರುವ ಅವರು ತುಳುನಾಡಿನ ಜಾನಪದ ಕಲೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಎ.ವಿ.ನಾವಡ ಅವರನ್ನು ಕುರಿತ ಈ ಪುಸ್ತಕವನ್ನು ಕಾಂತಾವರ ಕನ್ನಡ ಸಂಘವು ’ನಾಡಿಗೆ ನಮಸ್ಕಾರ’ ಸರಣಿಯ 129ನೇ ಪುಸ್ತಕವಾಗಿ ಪ್ರಕಟಿಸಿದೆ.
ಸಾಹಿತಿ, ಸಂಶೋಧಕ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು 1961 ಡಿಸೆಂಬರ್ 5ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ಜನಿಸಿದರು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಸಾಹಿತ್ಯ ರಚನೆ ಹಾಗೂ ಅಷ್ಟಾವಧಾನ ಕಾರ್ಯಕ್ರಮನಿರತರು. ಪ್ರಮುಖ ಕೃತಿಗಳು: ನುಡಿಸು ಬಾ ಇಂಚರವ, ಮತ್ತೆ ಬರಲಿ ಭಾವಗೀತೆ (ಕವನ), ಯಕ್ಷಗಾನ ಛಂದೋಗತಿ; ಯಕ್ಷಗಾನ ಛಂದಸ್ಸು; ಪಳಂತುಳುಕಾವ್ಯ (ಸಂಶೋಧನೆ) ಪುರಂದರ ದಾಸರ ಪದೊಕುಲು (ತುಳುವಿಗೆ) ಅನುವಾದ. ಯಕ್ಷಗಾನ ಸಾಹಿತ್ಯ ಚರಿತ್ರೆ. ಇವರಿಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ...
READ MORE