ಲೇಖಕ ಮಚ್ಛೇಂದ್ರ ಪಿ. ಅಣಕಲ್ ಅವರ ಕೃತಿ-ಬೀದರ ಜಿಲ್ಲೆಯ ಸಾಹಿತಿಗಳ ಪರಿಚಯ. ಹೆಸರೇ ಸೂಚಿಸುವಂತೆ ಬೀದರ ಜಿಲ್ಲೆಯ ಸಾಹಿತಿಗಳ ಹೆಸರುಗಳನ್ನು ಸಂಗ್ರಹ ಮಾಡಿ ಅವರ ಬದುಕು-ಸಾಹಿತ್ಯಕ ಸಾಧನೆಗಳನ್ನು ಸಂಕ್ಷಿಪ್ತವಾಗಿಯಾದರೂ ಸುಂದರವಾಗಿ ಕಟ್ಟಿಕೊಟ್ಟ ಕೃತಿ ಇದು. ಇದರಿಂದ, ಬೀದರ ಜಿಲ್ಲಾ ಸಾಹಿತಿಗಳ ಪರಿಚಯವನ್ನು ಒಂದೆಡೆ ನೀಡಿದಂತೆ ಮಾತ್ರವಲ್ಲ; ಸಾಹಿತಿಗಳ ಬದುಕಿನ ಸಾಧನೆಗಳ ಪಕ್ಷಿನೋಟವೂ ದೊರೆಯುತ್ತದೆ.
19ನೇ ಶತಮಾನದ ಆರಂಭದಿಂದ ಸಾಹಿತಿ, ಬರಹಗಾರರಾಗಿ ಆಗಿ ಹೋದ ತಿಪರಂತಿ ಮಾಸ್ತರರಿಂದ ಹಿಡಿದು ಈವರೆಗಿನ ಅಂದರೆ ಸುಮಾರು 585 ಕವಿ, ಸಾಹಿತಿ, ಲೇಖಕ ಹಾಗೂ ಹವ್ಯಾಸಿ ಬರಹಗಾರರ ಸಮಗ್ರ ಪರಿಚಯದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ. ಕರ್ನಾಟಕ ದಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಹಿತಿಗಳನ್ನು ಪರಿಚಯಿಸುವ ಕಳಕಳಿಯ ಕೃತಿ ಮೊದಲ ಬಾರಿಗೆ ಪ್ರಕಟವಾಗಿದೆ ಎಂಬ ಖ್ಯಾತಿ ಈ ಕೃತಿಗಿದೆ.
©2024 Book Brahma Private Limited.