‘ಪ್ರತಿಭಾ ಶಿಖರ ಪ್ರೊ. ಬಿ.ಎಚ್. ಶ್ರೀಧರ’ ಕೃತಿಯು ಆರ್.ಪಿ. ಹೆಗಡೆ ಹಾಗೂ ಜಿ.ಎಸ್ ಭಟ್ಟ ಅವರು ರಚಿಸಿರುವ ವ್ಯಕ್ತಿ ಚಿತ್ರಣ ಕೃತಿಯಾಗಿದೆ. ಚೇತನ ಸಾಹಿತ್ಯ ಕಲಾ ಸಾಧಕರ ಮಾಲೆಯಿಂದ ಈ ಕೃತಿಯು ಪ್ರಕಟಗೊಂಡಿರುತ್ತದೆ. ಇಲ್ಲಿ ಅವರ ವ್ಯಕ್ತಿತ್ವದ ಚಿತ್ರಣವನ್ನು ನೀಡಲಾಗಿದೆ. ಅವರ ಬದುಕಿನ ಆಯಾಮಗಳು, ಸಾಹಿತ್ಯದ ಕುರಿತ ವಿಚಾರಧಾರೆ, ಅವರ ಚಿಂತನೆಗಳನ್ನು ನಾವು ಇಲ್ಲಿ ಕಾಣಬಹುದು.
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...
READ MORE