ಸೊಡರು

Author : ಡಿ. ಅಜೇಂದ್ರಸ್ವಾಮಿ

Pages 92

₹ 50.00




Year of Publication: 2011
Published by: ಪಂಪಣ್ಣ ಪತ್ತಾರ ನೆನಪಿನ ಸಿರಿಸಂಪದ ಪ್ರತಿಷ್ಠಾನ
Address: 12-88, ಗುತ್ತಿಪೇಟೆ, ಶಹಾಪುರ-585223
Phone: 9591089997

Synopsys

ಡಿ. ಅಜೇಂದ್ರಸ್ವಾಮಿ ಅವರ ’ಸೊಡರು’ ವ್ಯಕ್ತಿಚಿತ್ರಗಳನ್ನು ಒಳಗೊಂಡ ಲೇಖನಗಳ ಕೃತಿ. ಇಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳು ಕಣಜಿ, ಹುಡಗಿ, ಆಲಗೂರದಂತಹ ಚಿಕ್ಕ ಗ್ರಾಮಗಳಿಂದ ಹೊರ ಹೊಮ್ಮಿದವರು. ಬದುಕಿನಲ್ಲಿ ನೋವನ್ನು ಉಂಡವರು. ಸ್ವಾಭಿಮಾನಿಗಳು, ಸ್ವಪ್ರಯತ್ನದಿಂದ ಮೇಲಕ್ಕೆ ಎದ್ದವರು. ಪರಿಸ್ಥಿತಿಗಳಿಗೆ ಮೆಟ್ಟಿ ನಿಂತವರು. ಸಾಮಾಜಿಕ ಕಳಕಳಿ ಉಳ್ಳವರು, ಇವರ ಬದುಕು ಓದುಗರಿಗೆ ಪ್ರೇರಣದಾಯಕ ಆಶಾಕಿರಣ. ಇವರಲ್ಲಿ ಕೆಲವರು ಸ್ವಾರ್ಥ ಮತ್ತು ಪರಾರ್ಥಗಳನ್ನು ಸಮದೂಗಿಸಿಕೊಂಡವರು. ತಮ್ಮ ಕುಟುಂಬದ ಜೊತೆಗೆ ಸಾಮಾಜಿಕ ಪ್ರಗತಿಗಾಗಿ ಶ್ರಮಿಸಿದವರು. ಮನೆಗೆದ್ದು ಮಾರು ಗೆದ್ದವರು, ಮತ್ತೆ ಕೆಲವರು ಕೌಟುಂಬಿಕ ಜೀವನದಲ್ಲಿ ಸೋಲು ಕಂಡವರು. ಆರ್ಥಿಕ ಬಡತನದ ಕರಾಳ ಹೊಡೆತಕ್ಕೆ ಸಿಕ್ಕು ಬಳಲಿದವರು. ತಮ್ಮ ಸಮಾಜವೆಂಬ ಸಾಣೆಕಲ್ಲಿನ ಮೇಲೆ ಸವೆಸಿ ಜೀವನ ಸುಗಂಧವನ್ನು ಪಸರಿಸಿದವರು. ಅವೆಲ್ಲವುಗಳಿಂದಾಗಿ 'ಜೀವನತತ್ವ' ಬೆಳಗಿದೆ. ಈ ಚಿಕ್ಕ ಕೃತಿ ಅಂತಹ ಜೀವನ ಸಾಧಕರಿಗೆ ಶ್ರದ್ಧಾಂಜಲಿ ಎನಿಸಿದರೂ ಜೀವನಕಲೆಯ ಮಹತ್ವದ ಪಾಠಗಳನ್ನು ಒಳಗೊಂಡಿದೆ. ಓದುಗರು ಪ್ರೇರಣೆ ಪಡೆದುಕೊಳ್ಳಬಹುದಾಗಿದೆ. ಈ ಕೃತಿಯ ಇನ್ನೊಂದು ವಿಶೇಷತೆ ಎಂದರೆ ಕರ್ನಾಟಕದ ಉತ್ತರ ಭಾಗದ ಜನಜೀವನದ ಪರಿಸ್ಥಿತಿಗಳನ್ನು ಅರುಹುವುದು. ಈ ಮಹಿಳೆಯರ ಸ್ಥಿತಿ ಅವರ ಧನಾತ್ಮಕ ಮನೋವೃತ್ತಿಗಳ ಬಗ್ಗೆ ಹಿಡಿದ ಕೈಗನ್ನಡಿ, ಇಂತಹ ಜೀವನ ಸಾಧಕರ ಬಗೆಗಿನ ಹೆಚ್ಚಿನ ಲೇಖನಗಳು ಹೊರಬಂದು ಬದುಕಿನ ವಾಸ್ತವಿಕತೆ ಹಾಗೂ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಸಾಧನೆಗೈಯುವ ಪರಿ ಜನಮನ ಅರಿತುಕೊಳ್ಳುವಂತಾಗಬೇಕು. ಕೃತಿಯಲ್ಲಿ ಕಲ್ಪನೆಗಳಿಲ್ಲ. ಇರುವುದೆಲ್ಲ ಕಟು ಸತ್ಯ. ಸಾಹಿತ್ಯ ಕ್ಷೇತ್ರದಲ್ಲಿ ಇಂತಹ ಪ್ರಯತ್ನ ಜರುಗುತ್ತಿರುವುದು ಪ್ರಶಂಸನೀಯ, ಸಾಹಿತ್ಯ ಬದುಕಿಗೆ ಪೂರಕವಾಗುವುದರ ಜೊತೆಗೆ ಮೌಲಿಕ ಬದುಕಿಗೂ ದಾರಿ ಮಾಡಿಕೊಡಬೇಕು. ಈ ಕೃತಿಯಲ್ಲಿ ಜೀವನ ಸಾಹಿತ್ಯ ಮೂಡಿಬಂದಿದೆ. ವಿವಿಧ ವೃತ್ತಿಗಳನ್ನು ನಿರ್ವಹಿಸುತ್ತ ಸಾಮಾಜಿಕ ಅಭಿವೃದ್ಧಿಗೆ ಹೇಗೆ ಕಾರಣವಾಗಬಹುದು ಎಂದು ತಿಳಿಸುತ್ತದೆ. ಗ್ರಾಮೀಣ ಬದುಕಿನ ಚಿತ್ರಣವು ಈ ಕೃತಿಯ ಲೇಖನಗಳ ಮೂಲಕ ದೊರೆಯುತ್ತದೆ. ವ್ಯಕ್ತಿ ಹಾಗೂ ಸಮಾಜ ಒಂದಕ್ಕೊಂದು ಹೇಗೆ ಪೂರಕ ಎಂಬುದನ್ನು ತಿಳಿಯಪಡಿಸುತ್ತದೆ. ಕೌಟುಂಬಿಕ ಸಂಬಂಧಗಳ ಒಳನೋಟವೂ ಉಂಟು, ಹೀಗೆ ಹಲವಾರು ದೃಷ್ಟಿಕೋನಗಳಿಂದ ಈ ಕೃತಿ ಮಹತ್ವದ್ದಾಗಿದೆ.

About the Author

ಡಿ. ಅಜೇಂದ್ರಸ್ವಾಮಿ

ಲೇಖಕ ಡಿ. ಅಜೇಂದ್ರಸ್ವಾಮಿ ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಸ್ನಾತಕೋತ್ತರ ಬಸವಾಧ್ಯಯನ ಕೋರ್ಸ್ ನಲ್ಲಿ ಚಿನ್ನದ ಪದಕದೊಂದಿಗೆ   ಡಿಪ್ಲೊಮಾ ಪದವೀಧರರು. ಹಾಸನ ಜಿಲ್ಲೆಯ ಹೆತ್ತೂರು, ಬೀದರ್ ಜಿಲ್ಲೆಯ ಹುಡಗಿ, ಚಿಂಚೋಳಿ, ಹುಮನಾಬಾದ್‌ಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಎರಡೂವರೆ ದಶಕಗಳ ಕಾಲ ಉಪನ್ಯಾಸಕಾರರಾಗಿ ಕೆಲಸ ಮಾಡಿದ್ದಾರೆ. ಕೃತಿಗಳು: ಸೊಡರು ...

READ MORE

Related Books