‘ಗುಣ ಗೌರವ’ ಜಿ. ಎಚ್. ನಾಯಕ ಅವರ ಲೇಖನಗಳ ಸಂಗ್ರಹವಾಗಿದೆ. ನವ್ಯೋತ್ತರ ಕಾಲದ ಹೆಚ್ಚಿನ ಸಾಹಿತಿಗಳೊಂದಿಗೆ ಒಡನಾಟ ಸಹ ಹೊಂದಿದ್ದ ಪ್ರೊ. ಜಿ. ಹೆಚ್. ನಾಯಕ್ ಅವರು ಕಂಡಂತೆ ಕೆಲವು ಶ್ರೇಷ್ಠ ಸಾಹಿತಿಗಳ ವ್ಯಕ್ತಿ ಚಿತ್ರಣಗಳು ಇಲ್ಲಿವೆ.
’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ...
READ MOREಹೊಸತು ಜುಲೈ-2002
ನವೋತ್ತರ ಕಾಲದ ಹೆಚ್ಚಿನ ಸಾಹಿತಿಗಳೊಂದಿಗೆ ಒಡನಾಟ ಹೊಂದಿದ್ದ ಪ್ರೊ|| ಜಿ. ಹೆಚ್. ನಾಯಕ್ ಅವರು ಕಂಡಂತೆ ಕೆಲವು ಶ್ರೇಷ್ಠ ಸಾಹಿತಿಗಳ ವ್ಯಕ್ತಿ ಚಿತ್ರಣಗಳು ಇಲ್ಲಿವೆ. ಒಂದು ತಲೆಮಾರಿನ ಸಾಹಿತಿಗಳನ್ನು, ಕೃತಿಗಳನ್ನು ಅರ್ಥೈಸಲು ಈ ಲೇಖನಗಳು ಇಂದಿನ ಪೀಳಿಗೆಯ ಜನರಿಗೆ ಸಹಕಾರಿ ಹಾಗೂ ಮಾರ್ಗದರ್ಶಿ. ಕಟು ವಿಮರ್ಶಕರೆಂಬ ಖ್ಯಾತಿಯ ಲೇಖಕರು ಗುಣದೋಷಗಳ ಬಗ್ಗೆ ಪಕ್ಷಪಾತ ಮಾಡಿದವರಲ್ಲ.