ಹಸಿರು ತೋರಣ

Author : ಎನ್.ಎಸ್. ಶ್ರೀಧರಮೂರ್ತಿ

Pages 516

₹ 400.00




Year of Publication: 2020
Published by: ಪ್ರಗತಿ ಪ್ರಕಾಶನ
Address: 2406,2407/ಕೆ1, 1ನೇ ಕ್ರಾಸ್, ಹೊಸ ಬಂಡಿಕೆರಿ ಕೆ ಆರ್ ಮೋಹಲ್ಲ, ಮೈಸೂರು- 5700004

Synopsys

‘ಹಸಿರು ತೋರಣ’ ಎನ್.ಎಸ್. ಶ್ರೀಧರಮೂರ್ತಿ ಅವರ ವಿಶಿಷ್ಟ ಕೃತಿ. ವಿಶ್ವದ ಪ್ರಸಿದ್ಧ ಸಾಧಕರ ಜೀವನ ಚಿತ್ರಣವನ್ನು ವಿವರಿಸಲಾಗಿದೆ. ಸೂಕ್ಷ್ಮ ಒಳನೋಟದ ಮೂಲಕ ವ್ಯಕ್ತಿಗಳ ಸಾಧನೆಗಳನ್ನು ವಿಶ್ಲೇಷಿಸಿರುವ ರೀತಿ ಅನನ್ಯವಾಗಿದೆ. ವಿಭಿನ್ನ ಕ್ಷೇತ್ರಗಳಲ್ಲಿ ಅಪರಿಮಿತ ಕ್ರಿಯಾಶೀಲತೆ ಮೆರೆದ ವ್ಯಕ್ತಿಗಳ ಜೀವನದ ವಿವಿಧ ಮಜಲುಗಳನ್ನು ಓದುಗರಿಗೆ ಸುಲಭವಾಗಿ ದಕ್ಕುವ ರೀತಿಯಲ್ಲಿ ಸರಳ ಭಾಷೆಯಲ್ಲಿ ವಿವರಿಸಿರುವುದು ಇಲ್ಲಿಯ ವಿಶೇಷ.

ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಮುಖಾಮುಖಿಯಾಗಿ, ಸವಾಲಿಗೆ ಪ್ರತಿಸವಾಲೆಸೆದು ಬದುಕನ್ನು ಸಕಾರಾತ್ಮಕವಾಗಿ ನೋಡಿ ಸಾಧನೆಯ ಶಿಖರವನ್ನೇರುವ ಸಾಧಕರು ಇಲ್ಲಿ ಮಾರ್ಗದರ್ಶಿಗಳಾಗಿದ್ದಾರೆ. ಪ್ರತಿ ಲೇಖನವೂ ಓದುಗರ ಮನಮುಟ್ಟುವುದರ ಜೊತೆಗೆ, ಜೀವನಪ್ರೀತಿಯೆಡೆಗೆ ಸಾಧನೆ ಮಾಡಲೇಬೇಕೆನ್ನುವ ಛಲವನ್ನು ಮೂಡಿಸುವುದು ಗಮನಾರ್ಹ. ವಯಸ್ಸಿನ ತಾರತಮ್ಯವಿಲ್ಲದೇ ಪ್ರತಿಯೊಬ್ಬರೂ ಓದಲೇ ಬೇಕಾದ ಕೃತಿ ಇದು ಎನ್ನುತ್ತಾರೆ ಕೃತಿಗೆ ಬೆನ್ನುಡಿ ಬರೆದ ಡಾ. ಡಿ. ಸತೀಶ್ ಚಂದ್ರ. 

 

About the Author

ಎನ್.ಎಸ್. ಶ್ರೀಧರಮೂರ್ತಿ
(24 August 1968)

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು  'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ಸಿಂಹಾವಲೋಕನ, ನಗುವ ನಯನ ಮಧುರ ಮೌನ, ಮಂಜುಳಾ ಎಂಬ ಎಂದೆಂದೂ ಮರೆಯದ ಹಾಡು, ಸಾಹಿತ್ಯ ಸಂವಾದ, ಹಾಡು ಮುಗಿಯುವುದಿಲ್ಲ, ಸಿನಿಮಾ ಎನ್ನುವ ನಾಳೆ’ ಅವರ ಪ್ರಮುಖ ಕೃತಿಗಳು. ಕನ್ನಡ ಚಿತ್ರಗೀತೆಗಳ ಸಾಂಸ್ಕೃತಿಕ ...

READ MORE

Related Books