ಖ್ಯಾತ ವಿಮರ್ಶಕ ಡಾ. ಟಿ.ಪಿ. ಅಶೋಕ ಅವರ ಪುಸ್ತಕ-ಕೃತಿ ಜಗತ್ತು. ಷೇಕ್ಸ್‌ಪಿಯರ್, ಯೇಟ್ಸ್, ಎಲಿಯಟ್, ಬ್ರೆಕ್ಟ್ , ಟಾಲ್‌ಸ್ಟಾಯ್, ಸಿಂಗರ್, ಹೆಮಿಂಗ್ವೇ ಸೇರಿದಂತೆ ಜಾಗತಿಕ ಮಟ್ಟದ 26 ಬರಹಗಾರರ ಬಗೆಗಿನ ಲೇಖನಗಳ ಸಂಗ್ರಹ 'ಕೃತಿ ಜಗತ್ತು'. ಕನ್ನಡದಲ್ಲಿ ಸಿಗುವ ಎಲ್ಲ ಪುಸ್ತಕಗಳೂ ನನಗೆ ಕನ್ನಡ ಪುಸ್ತಕಗಳೇ. ಓರ್ವ ಕನ್ನಡ ಭಾಷಿಕನಾಗಿಯೇ ನಾನು ವಿಶ್ವ ಸಾಹಿತ್ಯಕ್ಕೂ ಸ್ಪಂದಿಸುವುದು ಎಂಬ ಟಿ.ಪಿ. ಅಶೋಕ ಮಾತುಗಳು ಈ ಕೃತಿಯ ಮಹತ್ವವನ್ನು ಹೆಚ್ಚಿಸಿವೆ. ಸಾಹಿತಿಗಳ ಪರಿಚಯ, ಅವರ ಸಾಹಿತ್ಯಕ ಪ್ರಕಾರ, ಶೈಲಿ, ತಂತ್ರಗಳ ಅಧ್ಯಯನ ತಿಳಿಯಲು ಈ ಕೃತಿಯು ಒಳನೋಟಗಳನ್ನು ನೀಡುತ್ತದೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE