ಲೇಖಕ ಶರಣಗೌಡ ಎಸ್. ಪಾಟೀಲ, ಪಾಳಾ ಅವರ ಕೃತಿ-ಅವಿಸ್ಮರಣೀಯ. ಕಲಬುರಗಿ ತಾಲೂಕಿನ ಪಾಳಾ ಗ್ರಾಮದ ಸಂಕ್ಷಿಪ್ತ ಚರಿತ್ರೆ , ಆ ಗ್ರಾಮದಲ್ಲಿ ಸಾಧನೆಗೈದ ಮನೆತನ ಹಾಗೂ 11 ವ್ಯಕ್ತಿಗಳ ವ್ಯಕ್ತಿತ್ವ ಚಿತ್ರಣ ಕಟ್ಟಿಕೊಟ್ಟಿರುವುದು ಈ ಕೃತಿಯ ಹೆಗ್ಗಳಿಕೆ. ಪಾಳಾ ಗ್ರಾಮವನ್ನು ವಿಜಯಪುರವೆಂತಲೂ ಕರೆಯುತ್ತಿದ್ದು, ಭೂಗತವಾಯಿತು. ಈ ಗ್ರಾಮವನ್ನು 'ಹಾಳು' ಗ್ರಾಮವೆಂದು ನಂತರ ಜನರ ಬಾಯಲ್ಲಿ ‘ಉಳ್ಳಾಗಡ್ಡಿ ಪಾಳಾ’ ಎಂತಲೂ ಆಯಿತು. ಲಿಂಗಸೂಗೂರು ತಾಲೂಕಿನ ಜಲದುರ್ಗ ಕೋಟೆ ಪಾಳಾ ಅರಸರ ಅಧೀನದಲ್ಲಿ ಇದ್ದ ಈ ಗ್ರಾಮ ಅವರ ರಾಜಧಾನಿಯಾಗಿತ್ತು. ನಂತರ, ಆದಿಲಶಾಹಿ ಅವರ ವಶಕ್ಕೆ ಬಂದಿತ್ತು. ದೋ-ಅಬ್ ವಲಯ ಪ್ರದೇಶದಲ್ಲಿ ಅಪಾರ ಧನ ಕನಕ ಗಳನ್ನು ಗುಪ್ತವಾಗಿ ಇಟ್ಟಿದ್ದಾರೆಂದು ತಿಳಿದು ಅದಕ್ಕಾಗಿ ಕದನಗಳು ನಡೆದವು ಎಂಬುದನ್ನು ಗಮನಿಸಬಹುದು. ಜೊತೆಗೆ, ಸುಭಾಶ್ಚಂದ್ರ ಪಾಟೀಲ, ಸಹನಾಮೂರ್ತಿ ಸಾಹೇಗೌಡರು, ಕೃಷ್ಣಮೂರ್ತಿ ಮಹಾರಾಜರು, ಸಂಗಪ್ಪಗೌಡ ಪಾಟೀಲ್, ಬಸವರಾಜ ಗೌಡ ಪಾಟೀಲ್, ಅಯ್ಯನ ಗೌಡ ಪಾಟೀಲ್, ಸಾಹೇಬಗೌಡ ಕಾಶಿರಾಯ ಗೌಡ ಪೊಲೀಸಪಾಟೀಲ್, ಈರಣ್ಣ ಸಾಹುಕಾರ್ ಬನ್ನೂರ್, ಮಲ್ಕಪ್ಪ ಮಂಗಲಗಿ, ಪೀರಶೆಟ್ಟಿ ಮಗಿ, ಶರಣಗೌಡ ನಿಂಗ ಶೆಟ್ಟೆಪ್ಪ ಮಾಲಿಪಾಟೀಲ, ಮಳೆಪ್ಪಾಗೌಡ ಮಾಲಿಪಾಟೀಲ ಹೀಗೆ ವಿವಿಧ ನಾಯಕರ, ಸಾಂಸ್ಕೃತಿಕ ಧೀಮಂತರ ಪರಿಚಯ ನೀಡಿದ್ದಾರೆ. ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಈ ಕೃತಿಯನ್ನು ರಚಿಸಿದ್ದು, ಆತ್ಮೀಯವೆನಿಸುತ್ತದೆ. .
ಲೇಖಕ ಶರಣಗೌಡ ಎಸ್. ಪಾಟೀಲ್, ಪಾಳಾ ಅವರು ಮೂಲತಃ ಕಲಬುರಗಿ ತಾಲೂಕಿನ ಪಾಳಾ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಕಲಬುರಗಿಯಲ್ಲಿ ಪ್ರೌಢ, ಹಾಗೂ ಪದವಿ ಶಿಕ್ಷಣ ಪಡೆದರು. ತಂದೆ ಸುಭಾಶ್ಚಂದ್ರ ಪಾಟೀಲ್ ಅವರ ಹೆಸರಿನಲ್ಲಿ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ, ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರತಿ ವರ್ಷವೂ ‘ ಗೌಡ ’ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಕೃತಿಗಳು: ‘ಅವಿಸ್ಮರಣೀಯರು, ಗೌಡ (ಸಾಧಕರ ಪರಿಚಯ) ಕೃತಿಗಳನ್ನು ರಚಿಸಿದ್ದಾರೆ. ಟ್ರಸ್ಟ್ ವತಿಯಿಂದ ಕೃತಿಗಳನ್ನು ಪ್ರಕಾಶಿಸಿದ್ದಾರೆ. ಇವರ ಸೇವೆ ಗಮನಿಸಿ ವಿವಿಧ ಸಂಘ-ಸಂಸ್ಥೆಗಳು ಶಿಕ್ಷಣ ರತ್ನ, ಕಾಯಕರತ್ನ, ರಾಷ್ಟ್ರಮಟ್ಟದ 'ಜ್ಯೋತಿಬಾ ಪುಲೆ' ಪ್ರಶಸ್ತಿ ಲಭಿಸಿವೆ. ...
READ MORE