`ಬೆವರ ಹನಿಯ ಪಯಣ' ಯಲ್ಲಪ್ಪ ಹಂಚಿನಾಳ ಅವರ ಕೃತಿಯಾಗಿದ್ದು, ವೈದ್ಯಕೀಯ ರಂಗದಲ್ಲಿ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ಐ.ಬಿ.ಕೊಟ್ಟೂರಶೆಟ್ಟಿಯವರ ಜೀವನ ಚರಿತ್ರೆಯಾಗಿದೆ. ಅವರ ಬದುಕಿನ ಪ್ರತಿಯೊಂದು ಘಟನೆಯನ್ನು ಓದುವ, ಕೇಳುವ ಸುವರ್ಣವಕಾಶವಿದು. ಇದು ಜೀವನ ಚರಿತ್ರೆಯಾದರು ಇದರಲ್ಲಿ ಬಂದಿರುವ ನೈಜ ಪಾತ್ರ, ಘಟನೆಗಳಿಂದ ಇದೊಂದು 'ನೈಜ ಘಟನೆ' ಆಧಾರಿತ ಕಾದಂಬರಿ ಎನಿಸಬಹುದು. ಲೇಖಕರ ಮೊದಲ ಮೂರು ಕೃತಿಗಳಂತೆ ಇದು ಕೂಡ ಸಮಾಜಕ್ಕೆ ದೇಶಕ್ಕೆ ಅತೀ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ತಮ್ಮ ಮಕ್ಕಳನ್ನು ದೊಡ್ಡ ವ್ಯಕ್ತಿಗಳಾಗಿ ಕಾಣಲು ಇಷ್ಟಪಡುವ ಎಲ್ಲ ತಾಯಿ ತಂದೆಯರಿಗೆ ಇದು ಒಳಿತನ್ನು ಬಯಸುವದಷ್ಟೇ ಅಲ್ಲಾ, ಒಂದು ಸ್ಪೂರ್ತಿಯ ಚಿಂಗಾರಿಯಾಗುವದರಲ್ಲಿ ಯಾವುದೇ ಸಂದೇಹವಿಲ್ಲ .
ಲೇಖಕ ಯಲ್ಲಪ್ಪ ಮುದಕಪ್ಪ ಹಂಚಿನಾಳ (ಹಂಚಿ) ಅವರು ಗದಗ ಜಿಲ್ಲೆಯ ಹುಯಿಲಗೋಳದಲ್ಲಿ 1988 ಜುಲೈ 20ರಂದು ಜನಿಸಿದರು. ತಂದೆ ಮುದಕಪ್ಪ, ತಾಯಿ ಲಕ್ಷಮ್ಮವ್ವ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀಧರರು. ಭಾರತೀಯ ವಾಯು ಸೇನೆಯಲ್ಲಿ ವಾಯುಯೋಧನಾಗಿ 2008ರಲ್ಲಿ ವೃತ್ತಿ ಆರಂಭಿಸಿದ ಅವರು ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು. ಅವರ ‘ಸಾಹುಕಾರನ ಸೊಸೆ’ ಕಾದಂಬರಿ 2017ರಲ್ಲಿ ಪ್ರಕಟವಾಯಿತು. ಧರ್ಮದ ದಿಗ್ವಿಜಯ (ನಾಟಕ) 2019 ಹಾಗೂ ಅವರ ಇತ್ತೀಚಿನ ಕೃತಿ ‘ಕಥಾ ಹಂದರ' (ನೀಳ್ಗತೆಗಳು). ...
READ MORE