ವಿದ್ಯಾರಣ್ಯ ಚರಿತ್ರೆಯ ಭಾಗ-2 ರ ಅಡಿ ಡಿವಿಜಿ ಅವರು ಬರೆದ ಕೃತಿ-ವಿದ್ಯಾರಣ್ಯ ಸಮಕಾಲೀನರು. ವಿದ್ಯಾತೀರ್ಥರು, ಭಾರತೀಕೃಷ್ಣ ತೀರ್ಥರು, ಶಂಕರಾನಂದರು, ಶ್ರೀಕಂಠನಾಥರು, ಸಾಯಣಾಚಾರ್ಯರು, ಭೋಗನಾಥ ಕವಿ ಹೀಗೆ ಈ ಎಲ್ಲ ಮಹನೀಯರ ಜೀವನ, ಸಿದ್ಧಾಂತ ಹಾಗೂ ಅಧ್ಯಾತ್ಮ ಸಾಧನೆ ಕುರಿತು ವಿವರವಾಗಿ ಬರೆದಿದ್ದಾರೆ ಮಾತ್ರವಲ್ಲ; ಈ ಎಲ್ಲ ಗಣ್ಯರ ಕೃತಿಗಳನ್ನು ವಿಶ್ಲೇಷಿಸಿ, ಅದರ ಚಾರಿತ್ರಿಕ ಮಹತ್ವವನ್ನು ವಿವರಿಸಿದ್ದಾರೆ. .
ಮಂಕುತಿಮ್ಮನ ಕಗ್ಗ ಕಾವ್ಯದಿಂದ ಲೋಕವಿಖ್ಯಾತರಾದ ಡಿವಿಜಿ ಅವರು (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ) ಲೇಖಕ- ಪತ್ರಕರ್ತ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 1887ರ ಮಾರ್ಚ್ 17ರಂದು ಜನಿಸಿದ ಗುಂಡಪ್ಪ ಅವರು ಪ್ರೌಢಾಶಾಲಾ ಶಿಕ್ಷಣವನ್ನು ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಪಡೆದರು. ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಸ್ವಂತ ಅಧ್ಯಯನದಿಂದ ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಗಳಲ್ಲಿ ಪರಿಣತರಾಗಿದ್ದರು. ಮುಳುಬಾಗಿಲಿನ ಒಂದು ಶಾಲೆಯಲ್ಲಿ ಕೆಲವು ಕಾಲ ಬದಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ಅನಂತರ ಕೋಲಾರದ ಸೋಡಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿ ಬೇಸತ್ತು ಬೆಂಗಳೂರಿನಲ್ಲಿ ಜಟಕಾಬಂಡಿಗೆ ಬಣ್ಣ ಬಳಿಯುವ ಕಾರ್ಖಾನೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಅನಂತರ ಪತ್ರಿಕಾರಂಗ ...
READ MORE