‘ತೇಜಸ್ವಿ ಕೆಲವು ಪ್ರಸಂಗಗಳು’ ಎಚ್.ಎಸ್. ಸತ್ಯನಾರಾಯಣ ಅವರ ತೇಜಸ್ವಿ ಕುರಿತ ಬರಹಗಳ ಸಂಗ್ರಹವಾಗಿದೆ. ಕೃತಿಗೆ ಡಾ. ಸರ್ವೇಶ್ ಬಂಟಹಳ್ಳಿ ಹಾಗೂ ದೊಡ್ಡಕಲ್ಲಳ್ಳಿ ನಾರಾಯಣಪ್ಪ ಅವರ ಬೆನ್ನುಡಿ ಬರಹವಿದೆ; ಪ್ರಕೃತಿಯೊಡನೆ ಸುಖ ದುಃಖಗಳ ಅವಿನಾಭಾವ ಸಂಬಂಧ ಹೊಂದಿದ್ದ ಅಪರೂಪದ ಲೇಖಕರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆಯುವ, ಬದುಕುವ ಬಗೆಯನ್ನು ನಮಗೆಲ್ಲ ಕಲಿಸಿದವರು. ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಈ ಕೃತಿಯಲ್ಲಿ ಲೇಖಕರ ಸ್ವಾನುಭವದ ಜೊತೆಜೊತೆಗೆ ಕೇಳಿದ, ಓದಿದ ಪುಟ್ಟ ಪುಟ್ಟ ಸಂಗತಿಗಳು ಜೊತೆಗೂಡಿ ಇಡಿಯಾಗಿ ತೇಜಸ್ವಿಯವರನ್ನು ಪರಿಚಯ ಮಾಡಿಕೊಡುತ್ತದೆ. ಈ ಬಿಡಿ ಬಿಡಿ ಬರಹಗಳನ್ನು ಎಲ್ಲಿಂದ ಬೇಕಾದರೂ ಪ್ರವೇಶಿಸಬಹುದು, ಎಲ್ಲಿ ಬೇಕಾದರೂ ನಿರ್ಗಮಿಸಬಹುದು. ತೇಜಸ್ವಿಯವರ ವಿಸ್ತಾರ ಬದುಕಿನ ಹಲವು ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಈ ಚಿಟ್ಟೆ ಕತೆಗಳು ಸಫಲವಾಗಿವೆ. ತೇಜಸ್ವಿಯವರ ಬದುಕು-ಬರಹಗಳ ಅಬ್ಬಿಗೆ ಇದೊಂದು ಪುಟ್ಟ ಹಾಯಿದೋಣಿಯಂತಹ ಪುಸ್ತಕ ತೇಜಸ್ವಿಯವರ ಸ್ವಭಾವವನ್ನು ಚೆನ್ನಾಗಿ ಅರಿತಿದ್ದ ಡಾ.ಎಚ್.ಎಸ್. ಸತ್ಯನಾರಾಯಣ ಅವರು ಯಾವುದೇ ಅತಿರೇಕದ ವರ್ಣನೆಗಿಳಿಯದೆ, ಒಂದು ಬಗೆಯ ನಿರ್ಲಿಪ್ತತೆಯನ್ನು ಕಾಯ್ದುಕೊಂಡು ತಮಗೆ ಕಾಣಿಸಿದ್ದನ್ನು ಓದುಗರಿಗೂ ತೋರಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
©2024 Book Brahma Private Limited.