‘ಬಂಗಾರದ ಮನುಷ್ಯರು’ (ಬೆಳಕಿನ ಬೇಸಾಯದ ಕಥಾನಕ) ಲೇಖಕ ಚಿನ್ನಸ್ವಾಮಿ ವಡ್ಡಗೆರೆ ಅವರ ಕೃತಿ. ಈ ಪುಸ್ತಕಕ್ಕೆ ಪ್ರೊ. ಕಾಳೇಗೌಡ ನಾಗವಾರ ಮುನ್ನುಡಿ ಬರೆದಿದ್ದಾರೆ. ಅಧ್ಯಾಪಕ, ಪತ್ರಕರ್ತ, ಚಿಂತಕ, ಕೃಷಿಕ ಮತ್ತು ಆರೋಗ್ಯಕರ ಸಮಾಜದ ಕನಸುಗಾರರಾಗಿ ಮಾಗುತ್ತಿರುವ ಗೆಳೆಯ ಚಿನ್ನಸ್ವಾಮಿ ಅವರ ಬಂಗಾರದ ಮನುಷ್ಯರು ನೇಗಿಲ ಯೋಗಿಗಳ ಬೆಳಕಿನ ಬೇಸಾಯದ ವಿವಿಧ ಕಥಾನಕಗಳ ಸದಭಿರುಚಿ ಮತ್ತು ಜನಪರ ನಿಲುವುಗಳ ಉಪಯುಕ್ತ ಸಂಪುಟ ಎನ್ನುತ್ತಾರೆ ಹಿರಿಯ ಲೇಖಕ ಕಾಳೇಗೌಡ ನಾಗವಾರ.
ಬೇರೆ ಬೇರೆ ಹಿನ್ನೆಲೆಗಳ ತದೇಕಚಿತ್ತದ ನಿಜವಾದ ಮಣ್ಣಿನ ಮಕ್ಕಳ ಹೊನ್ನಿನ ಕ್ರಿಯೆಗಳು ಮತ್ತು ಸಾಧಕನ ಪ್ರಯತ್ನಗಳನ್ನು ಕಂಡು, ಕೇಳಿ, ತಿಳಿದು, ಆಲೋಚಿಸುತ್ತಲೇ ಓದುಗರಿಗೆ ಜನಪರವಾಗಿ ನಾವೂ ಮುನ್ನುಗ್ಗಬೇಕೆನ್ನುವ ಹಂಬಲ ಮೂಡಿಸುವುದು ಈ ಗ್ರಂಥದ ವೈಶಿಷ್ಟ್ಯ. ಸೃಜನಶೀಲವೂ, ತುಂಬಾ ಪ್ರಾಯೋಗಿಕವೂ, ಪರಿಸರಸ್ನೇಹಿಯೂ ಆದ ಬದುಕಿನ ಕ್ರಮ ಹಾಗೂ ತಲ್ಲೀನತೆಯಲ್ಲಿಯ ಆನಂದದಾಯಕ ಸೊಗಸುಗಳನ್ನು ಕನ್ನಡ ಓದುಗರಿಗೆ ಪರಿಣಾಮಕಾರಿಯಾಗಿ ನೀಡಿರುವ ಬಂಗಾರದ ಮನುಷ್ಯರು ಕೃಷಿ ಸಾಹಿತ್ಯದಲ್ಲೇ ಅಪರೂಪ ಎನ್ನಬಹುದಾದ ಗ್ರಂಥವಾಗಿದೆ ಎಂದು ಪ್ರಶಂಸಿಸಿದ್ದಾರೆ.
ಚಿನ್ನಸ್ವಾಮಿ ವಡ್ಡಗೆರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ (1993-95) ಪಡೆದರು. ಕೆಲಕಾಲ ಚಾಮರಾಜನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ಪಿ.ಲಂಕೇಶ್‌ರ ಬರಹಗಳಿಂದ ಪ್ರಭಾವಿತರಾಗಿ ಪತ್ರಿಕೋದ್ಯಮದಲ್ಲಿ ಆಸಕ್ತಿ, ಮೈಸೂರಿನ "ಆಂದೋಲನ ಮತ್ತು "ವಿಜಯ ಕರ್ನಾಟಕ' ದಿನಪತ್ರಿಕೆಗಳಲ್ಲಿ ದಶಕಗಳ ಕಾಲ ಹಿರಿಯ ಉಪಸಂಪಾದಕರಾಗಿ ಜವಾಬ್ದಾರಿ ನಿರ್ವಹಣೆಯನ್ನು ಮಾಡಿದರು. ಐದಾರು ವರ್ಷಗಳ ಕಾಲ ನಿರ್ದಿಷ್ಟ ಗುರಿ ಉದ್ದೇಶಗಳಿಲ್ಲದೆ ಅಲೆದಾಟ ನಡೆಸಿ ನಂತರ ಕೃಷಿಕರಾದರು. ಕಾಡುಕೃಷಿ, ಒಣಭೂಮಿ ಬೇಸಾಯ, ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಯಲ್ಲಿ ವಿಶೇಷ ಆಸಕ್ತಿಯನ್ನು ...
READ MORE