ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರ ಸಂಪಾದನಾ ಕೃತಿ-ಸಾಂಸ್ಕೃತಿಕ ಸಾಧಕರು. ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಕಟ್ಟಿ ಬೆಳೆಸುವಲ್ಲಿ ಸಾವಿರಾರು ಜನರು ತಮ್ಮದೇ ನೆಲೆಯಲ್ಲಿ ಶ್ರಮಿಸಿದ್ದಾರೆ. ಶಾಸ್ತ್ರೀಯ ಭಾಷೆಯಾದ ಕನ್ನಡವನ್ನು ಮತ್ತು ಆ ಮೂಲಕ ಕನ್ನಡತನವನ್ನು ಉಳಿಸಿ ಬೆಳೆಸಿದವರು ಅಸಂಖ್ಯ. ಇಂತಹವರ ಚಾರಿತ್ರಿಕ ಪರಿಚಯವು ಈ ಕೃತಿಯ ಹೆಚ್ಚುಗಾರಿಕೆ. ಸಾಹಿತಿ ವಿಕ್ರಮ ವಿಸಾಜಿ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ತಮ್ಮವರ ಸಾಧನೆಗಳನ್ನು ಹಿಂತಿರುಗಿ ನೋಡುವ ಉತ್ಸಾಹ, ವಿವೇಕ ಇಲ್ಲಿಯ ಲೇಖನಗಳಲ್ಲಿವೆ. ಕೇವಲ ಸ್ಮರಣೆ ಮಾತ್ರವಿಲ್ಲ; ಹೊಸ ದಾರಿಗಳು ನಿರ್ಮಾಣವಾಗಬೇಕು ಎಂಬ ಹಂಬಲವಿದೆ. ಈ ಸಾಧಕರಿಂದ ತಮ್ಮ ಬದುಕಿಗೆ ಹೊಸ ತಿಳಿವಳಿಕೆಗಳು ಪಡೆಯಬೇಕು ಎಂಬ ಆಶಯವಿದೆ. ಸಮಾಜದ ಘನತೆಯನ್ನು ಹೊಸ ಬಗೆಯಲ್ಲಿ ಕಟ್ಟಬಹುದೆಂಬ ತುಡಿತವಿದೆ. ಹೀಗಾಗಿ, ಇಲ್ಲಿಯ ಬರಹಗಳು ಆಪ್ತವಾಗಿ ಮೂಡಿಬಂದಿವೆ. ಇಲ್ಲಿಯ ಲೇಖನಗಳು ವಿದ್ಯಾರ್ಥಿಗಳ ಆಲೋಚನಾ ಕ್ರಮವನ್ನು ಕಾಳಜಿಪೂರ್ವಕವಾಗಿ ರೂಪಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.