‘ಭವಿಷ್ಯತ್ತಿನ ಪ್ರಭುತ್ವದ ಸ್ವರೂಪ’ ಸುರೇಶ ಭಟ್ ಬಾಕ್ರಬೈಲು ಅವರ ಒಂದು ಅವಲೋಕನ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ವರ್ತಮಾನವು ಭವಿಷ್ಯಕ್ಕೆ ಅಡಿಗಲ್ಲು. ಮುಂದೇನು ಎಂಬುದಕ್ಕೆ ಇಂದು ಸೂಚನೆ ನೀಡುತ್ತದೆ. ಯಾವುದೂ ಸೂಚನೆ ಇಲ್ಲದೆ ಥಟಕ್ಕನೆ ಉದ್ಭವಿಸುವುದಿಲ್ಲ. ಚಿಲಿಯಲ್ಲಿ ಅಲೆಂಡೆ ಪ್ರಭುತ್ವವನ್ನು ಹೊಸಕಿಹಾಕಿ ಪೈಶಾಚಿಕ ಪಿನೋಶೆಯ ಸರ್ಕಾರ ಸ್ಥಾಪನೆಗೊಂಡಿತು. ಭಾರತದಲ್ಲಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯನ್ನು ಪಲ್ಲಟಗೊಳಿಸದೆಯೇ ಅನಿಯಂತ್ರಿತ ಏಕಾಧಿಪತ್ಯವು ಹೊಮ್ಮುತ್ತದೆಯೋ ಎಂಬ ಆತಂಕವಿದೆ. ವಿಕಾಸವು ಯಾವ ದಿಕ್ಕಿನಲ್ಲಿ ಜರುಗುತ್ತದೆಂಬ ಭವಿಷ್ಯವಾಣಿಗಿಂತಲೂ ಯಾವ ಮಹದಾಶವು ಸಮುದಾಯಕ್ಕೆ ಪ್ರೇರಣೆ ನೀಡುತ್ತದೆಂಬುದು ಹೆಚ್ಚು ಪ್ರಸ್ತುತವಾದ್ದು. ಈ ದೃಷ್ಟಿಯಿಂದ ಚಾಮ್ ಸ್ಕಿಯ ಕೃತಿಗಳು ಮೌಲಿಕವಾದವು ಮತ್ತು ವಿಶಾಲ ಚಿಂತನೆಗೆ ಗ್ರಾಸ ಒದಗಿಸುವಂಥವು.
ಮಂಗಳೂರಿನವರಾದ ಸುರೇಶ ಭಟ್ ಬಾಕ್ರಬೈಲ್ ಅವರು ಸುರತ್ಕಲ್ ನ ಕೆ.ಆರ್.ಇ.ಸಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದವರು. ಮುಂಬಯಿಯಲ್ಲಿ ವಾಣಿಜ್ಯ ನೌಕೆ, ನೌಕಾ ನಿರ್ಮಾಣ, ಡೀಸಲ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು 2006ರಲ್ಲಿ ನಿವೃತ್ತರಾದರು. ನಿವೃತ್ತರಾದ ನಂತರ ಅವರು ಬರಹ ಹಾಗೂ ಮಾನವ ಹಕ್ಕು, ಕೋಮು ಸೌಹಾರ್ದ ಚಳವಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಕಾಲೀನ ವಿಷಯಗಳ ಬಗ್ಗೆ ಬರೆಯುವದರ ಜೊತೆಗೆ ಕೋಮುವಾದದ ವಿರುದ್ಧ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಕೇಸರಿ ಭಯೋತ್ಪಾದನೆ, ಮಂಕು ಬೂ(ಮೋ)ದಿ ಪುಸ್ತಕಗಳನ್ನು ಬರೆದಿದ್ದಾರೆ. ಹಾಗೆಯೇ ಕರ್ಕರೆಯನ್ನು ಕೊಂದವರು ಯಾರು?, ಜೈಲಿನ ...
READ MORE