‘ಕಲಾವಿದರ ಕಥಾನಕ’- ಲೇಖಕ ಕಗ್ಗೆರೆ ಪ್ರಕಾಶ್ ಅವರು ರಚಿಸಿರುವ ಕಲಾವಿದರ ಜೀವನ ಚಿತ್ರಣ. ಕನ್ನಡ ಚಿತ್ರೋದ್ಯಮದ ಒಳ ನೋಟ, ಕಲಾವಿದರ ನೋವು, ಹತಾಷೆ, ಅನುಭವ ಎಲ್ಲವೂ ಈ ಪುಸ್ತಕದಲ್ಲಿ ದಾಖಲಾಗಿವೆ. ಕಲಾವಿದರ ಬದುಕು ಹೂವಿನ ಹಾಸಿಗೆಯಲ್ಲ ಎಂಬುದನ್ನು ಈ ಕೃತಿ ವಿವರಿಸುತ್ತದೆ. ಜೀವನಾನುಭವದ ಸ್ವಾದ, ಅವಕಾಶ, ಸುಖ-ದುಃಖದ ಬುತ್ತಿ ಎಲ್ಲವನ್ನೂ ಲೇಖಕರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. 'ಕಲಾವಿದರ ಕಥಾನಕ' ಪುಸ್ತಕ ಕನ್ನಡ ಸಿನಿಮಾ ಉದ್ಯಮ ಬೆಳೆದ ಮೈಲಿಗಲ್ಲಿಗೂ ಸಾಕ್ಷಿ ಆಗುತ್ತದೆ. ಸಿನಿಮಾ ಆಸಕ್ತ ವಿದ್ಯಾರ್ಥಿಗಳಷ್ಟೇ ಅಲ್ಲ, ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ ಇದು. ಈ ಕೃತಿಗೆ 'ಅತ್ತಿಮಬ್ಬೆ ವಿಶೇಷ ಪ್ರಶಸ್ತಿ' ಲಭಿಸಿದೆ..
ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...
READ MORE